ಮುದ್ದೇಬಿಹಾಳ:ಆಪರೇಷನ್ ಸಿಂಧೂರ ಕಾರ್ಯಾಚರಣೆ ಸ್ಮರಣೀಯವಾಗಿಸಲು, ದೇಶದ ಸೈನಿಕರ ಮನೋಬಲ ಹೆಚ್ಚಿಸಲು ಮೇ ೨೦ರಂದು ಮುದ್ದೇಬಿಹಾಳದಲ್ಲಿ ಸಮಸ್ತ ನಾಗರಿಕರು, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದೇಶಕ್ಕಾಗಿ ಒಂದು ಹೆಜ್ಜೆ-ತಿರಂಗಾ ಯಾತ್ರೆ, ದೇಶಸೇವೆಯಲ್ಲಿರುವ ಹಾಗೂ ಯುದ್ಧ, ಭಯೋತ್ಪಾದಕ ದಾಳಿಗಳಲ್ಲಿ ಹುತಾತ್ಮರಾಗಿರುವ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಸ್ಮರಣಿಕೆ ಸಹಿತ ಸನ್ಮಾನಿಸಿ ಗೌರವಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ನಡಹಳ್ಳಿ ಆರ್ಗ್ಯಾನಿಕ್ ಡೇರಿ ಪ್ಯೂರ್ ಪ್ರೊಡಕ್ಟ್÷್ಸನ ಕಾರ್ಯಾಲಯ ಆವರಣದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಹತ್ತಿರ ಹೋಗಿ ಅಭಿನಂದಿಸಲು ಆಗುವುದಿಲ್ಲ. ಅದರ ಬದಲು ಅವರ ಪತ್ನಿ, ತಾಯಿ, ತಂದೆ ಅಥವಾ ಕುಟುಂಬದ ಒಬ್ಬರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದರು. ಈಗಾಗಲೇ ೨೫-೩೦ ಮಾಜಿ ಸೈನಿಕರು ಸೇವೆಯಲ್ಲಿರುವ ಮತ್ತು ಹುತಾತ್ಮರಾದ ಸೈನಿಕರ ವಿವರ, ಕುಟುಂಬದ ಮಾಹಿತಿ ಸಂಗ್ರಹಿಸಿ ಅವರನ್ನು ಸಂಪರ್ಕಿಸಿ ಆಹ್ವಾನಿಸಿದ್ದಾರೆ. ೨೫೦ ಜನರನ್ನು ಸನ್ಮಾನಿಸುವ ಗುರಿ ಇದೆ. ಯಾರಾದರೂ ಬಿಟ್ಟು ಹೋಗಿದ್ದಲ್ಲಿ ಅಂದು ನೇರವಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಸನ್ಮಾನ ಸ್ವೀಕರಿಸಬೇಕು ಎಂದರು.
ಸನ್ಮಾನಕ್ಕೂ ಮುನ್ನ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಹುತಾತ್ಮ ಯೋಧರ ಸ್ಮಾರಕ ಇರುವ ಸೈನಿಕ ಮೈದಾನದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ತಿರಂಗಾ ಯಾತ್ರೆ ನಡೆಸಲಾಗುತ್ತದೆ. ಪ್ರತಿಯೊಬ್ಬರ ಕೈಯಲ್ಲಿ ರಾಷ್ಟçಧ್ವಜ ಹೊರತು ಬೇರೆ ಯಾವ ಧ್ವಜವೂ ಇರುವುದಿಲ್ಲ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್ ಸೇರಿ ಎಲ್ಲ ಧರ್ಮಗಳ, ಜಾತಿಗಳ ಜನರು ಮುಕ್ತವಾಗಿ, ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳಬಹುದಾಗಿದೆ. ವೇದಿಕೆ ಮೇಲೆ ಗಣ್ರ್ಯಾರೂ ಇರುವುದಿಲ್ಲ. ಎಲ್ಲರೂ ಮುಂಭಾಗದಲ್ಲೇ ಕುಳಿತುಕೊಳ್ಳುತ್ತಾರೆ. ವಿವಿಧ ರಂಗದಲ್ಲಿ ಕೆಲಸ ಮಾಡುವಂಥವ ಒಬ್ಬೊಬ್ಬರಿಗೆ ೫ ನಿಮಿಷದಂತೆ ೪೫ ನಿಮಿಷಗಳ ಕಾಲ ಮಾತನಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ಸಂಗಣ್ಣ ಕಟ್ಟಿ, ಡಾ.ಚಂದ್ರಶೇಖರ ಶಿವಯೋಗಿಮಠ, ರಾವುಸಾಬ ದೇಸಾಯಿ ಮಾತನಾಡಿ ಪೂರ್ವಸಿದ್ದತೆಗಳ ಮಾಹಿತಿ ನೀಡಿದರು. ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಬಸವರಾಜ ಮುರಾಳ, ಬಸಪ್ಪ ತಟ್ಟಿ, ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ಮುಖಂಡರಾದ ಗಿರೀಶಗೌಡ ಪಾಟೀಲ ಹಿರೇಮುರಾಳ, ಪ್ರಭು ಕಡಿ, ಸಿದ್ದರಾಜ ಹೊಳಿ, ಹಣಮಂತ ನಾಯ್ಕಮಕ್ಕಳ, ಲಕ್ಷö್ಮಣ ಬಿಜ್ಜೂರ, ಶಂಕರಗೌಡ ಶಿವಣಗಿ, ಸೋಮಶೇಖರ ಮೇಟಿ, ಡಾ.ರೇವಣಸಿದ್ದ ಮಸೂತಿ, ಡಾ.ವೀರೇಶ ಪಾಟೀಲ, ವಿಜಯಕುಮಾರ ಬಡಿಗೇರ, ಸೋಮನಗೌಡ ಬಿರಾದಾರ, ಎಂ.ಆರ್.ಪಾಟೀಲ ವಕೀಲರು, ರಾಜು ಬಳ್ಳೊಳ್ಳಿ, ಸಂಗಮೇಶ ಗುಂಡಕನಾಳ ನಾಗೂರ, ಬಸವರಾಜ ಸರೂರ, ಶೇಖರ ಢವಳಗಿ, ಪುನೀತ್ ಹಿಪ್ಪರಗಿ, ರಾಜಶೇಖರ ಮ್ಯಾಗೇರಿ, ಗೌರಮ್ಮ ಹುನಗುಂದ, ರೇಖಾ ಕೊಂಡಗೂಳಿ, ಕಾವೇರಿ ಕಂಬಾರ, ನಾಗೇಶ ಕವಡಿಮಟ್ಟಿ, ಬರಮಣ್ಣ ಹಂಚಿನಾಳ, ವಿರೇಶ ಜಂಗಡಬಾಯಿ, ಸೇರಿದಂತೆ ಉಪಸ್ಥಿತರಿದ್ದರು.
ಒಂದು ಗಂಟೆ ನಡೆಯುವ ತಿರಂಗಾ ಯಾತ್ರೆಯಲ್ಲಿ ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಎಲ್ಲರೂ ಭಾಗವಹಿಸಿ ಒಗ್ಗಟ್ಟು ತೋರಿಸಿ ದೇಶದ ಪರ ನಾವಿದ್ದೇವೆ ಅನ್ನೋ ಸಂದೇಶವನ್ನು ರವಾನಿಸಬೇಕು.
-ಎ.ಎಸ್.ಪಾಟೀಲ ನಡಹಳ್ಳಿ, ರಾಜ್ಯಾಧ್ಯಕ್ಷರು, ಬಿಜೆಪಿ ರೈತ ಮೋರ್ಚಾ.