ಇಂಡಿ :

ಪಹಲ್ಗಾಮ ದಾಳಿಗೆ ಪ್ರತೀಕಾರವಾಗಿ ನಮ್ಮ ಸೈನಿಕರು ಅಪರೇಷನ್ ಸಿಂದೂರ ಹೆಸರಿನಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನ ನೆಲದಲ್ಲಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ಮಿಡ್ ನೈಟ ದಾಳಿ ನಡೆಸಿ ಅವುಗಳನ್ನು ಸಂಪೂರ್ಣವಾಗಿ ನಾಶ ಪಡಿಸಿದ್ದು ಹೆಮ್ಮೆಯ ಸಂಗತಿ. ದೇಶ ದ್ರೋಹಿಗಳ ಆಶ್ರಯತಾಣವಾದ ಪಾಪಿ ಪಾಕಿಸ್ತಾನವನ್ನು ಮಟ್ಟ ಹಾಕುವಲ್ಲಿ ನಮ್ಮ ಸೈನ್ಯ ಸದೃಡವಾಗಿದೆ.
ಬಿ.ಎಸ್.ಪಾಟೀಲ ಹಿರೇಬೇವನೂರ

ಸುಮ್ಮನಿದ್ದ ಭಾರತೀಯರನ್ನು ಪಹಲ್ಗಾಮ ದಾಳಿ ಮುಖಾಂತರ ಕೆಣಕಿದ ಪಾಕಿಗಳಿಗೆ ತಕ್ಕ ಶಿಕ್ಷೆ ಕೊಡಲು ಇದು ಸಕಾಲವಾಗಿದೆ. ಪ್ರಾಥಮಿಕವಾಗಿ ನಮ್ಮ ಸೈನಿಕರು ಭಯೋತ್ಪಾದಕ ನೆಲೆಗಳನ್ನು ಸುಟ್ಟು ಹಾಕಿದ್ದು ೧೪೦ ಕೋಟಿ ಭಾರತೀಯರ ಆಕ್ರೋಶಕ್ಕೆ ನೆಮ್ಮದಿ ಕೊಟ್ಟಂತಾಗಿದೆ. ಆದರೆ ಇದು ಇಷ್ಟಕ್ಕೆ ನಿಲ್ಲದೆ ಉಗ್ರರನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು.
ಅನೀಲ ಪ್ರಸಾದ ಏಳಗಿ ಅಧ್ಯಕ್ಷರು ದಾನಮ್ಮದೇವಿ ದೇವಸ್ಥಾನ

ಭಾರತೀಯರು ಶಾಂತಿ ಪ್ರಿಯರು ಅನವಶ್ಯವಾಗಿ ಯಾರಿಗೂ ತೊಂದರೆ ಕೊಡುವದಿಲ್ಲ. ಆದರೆ ನಮ್ಮ ದೇಶದ ಅಮಾಯಕ ನಾಗರಿಕರ ಮೇಲೆ ದಾಳಿ ನಡೆಸಿದ ಪಾಕ್ ಪೋಷಿತ ಉಗ್ರ ಸಂಘಟನೆ ಗಳಿಗೆ ಸುಮ್ಮನೆ ಬಿಡುವ ಪ್ರಮೇಯವೇ ಇಲ್ಲ ಎಂದು ನಮ್ಮ ಹೆಮ್ಮೆಯ ಸೈನಿಕರು ಮಿಶೆಲ್ ದಾಳಿ ಮುಖಾಂತರ ಸ್ಪಷ್ಟ ಸಂದೇಶವನ್ನು ಎದುರಾಳಿಗಳಿಗೆ ರವಾನಿಸಿದ್ದಾರೆ. ಇದು ಕೇವಲ ಆರಂಭಿಕದಾಳಿ ಮಾತ್ರ, ಪಾಕಿಸ್ತಾನ ಭಯೋತ್ಪಾದಕ ನೆಲಗಳನ್ನು ಸಂಪೂರ್ಣವಾಗಿ ನಾಶ ಪಡಿಸುವದು ಶತ ಸಿದ್ದ.
ಶೈಲೇಶ ಬೀಳಗಿ ಪ್ರಥಮ ದರ್ಜೆ ಗುತ್ತಿಗೆದಾರರು.

ಪಾಕಿಸ್ತಾನದ ಉಗ್ರರ ತಾಣಗಳಲ್ಲಿ ಏರ್ ಸ್ಟೆçöÊಕ್ ಮೂಲಕ ಭಾರತ ಉಗ್ರರಿಗೆ ತಕ್ಕ ಉತ್ತರ ಕೊಟ್ಟಿದೆ. ರಾತೋ ರಾತ್ರಿ ನಮ್ಮ ಭಾರತೀಯ ಸೇನಾ ಪಡೆ ಯೋಧರು ಅಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸುವ ಮೂಲಕ ಉಗ್ರರ ನೆಲೆಯನ್ನು ಧ್ವಂಸ ಮಾಡಿದ್ದಾರೆ. ಪಾಕಿಸ್ತಾನಿಗಳ ಮತ್ತು ಭಯೋತ್ಪಾದಕರ ಹುಟ್ಟಡಗಿ ಭಾರತೀಯ ಸೇನೆಗೆ ಧನ್ಯವಾದ ಸಲ್ಲಿಸುತ್ತೇನೆ.
ಶಂಕರಗೌಡ ಪಾಟೀಲ ಡೋಮನಾಳ


















