ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಣೆ ಮಾಡಿದ್ದ ಸಹಾಯಧನ ಸುಹಾಸ್ ಶೆಟ್ಟಿ ಕುಟುಂಬಕ್ಕೆ ರೂ.5 ಲಕ್ಷ ಚೆಕ್ ವಿತರಣೆ
ಸುಹಾಸ್ ಶೆಟ್ಟಿ ಕುಟುಂಬಕ್ಕೆ ರೂ.5 ಲಕ್ಷ ಶಾಸಕ ಯತ್ನಾಳ ಘೋಷಣೆ
ವಿಜಯಪುರ: ಸದಾ ಹಿಂದುತ್ವ, ಹಿಂದೂಗಳ ಪರವಾಗಿ ಗಟ್ಟಿಯಾಗಿ ನಿಲ್ಲುವ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು, ಈಚೆಗೆ ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಕುಟುಂಬವರಿಗೆ ಸಾಂತ್ವನ ಹೇಳಿ, ರೂ.5 ಲಕ್ಷ ಸಹಾಯ ಧನ ಘೋಷಿಸಿದಂತೆ, ಮಂಗಳವಾರ ಶಾಸಕರ ಆಪ್ತ ಸಹಾಯಕರು ಬಂಟ್ವಾಳ ತಾಲ್ಲೂಕಿನ ಕಾರಿಂಜ ಗ್ರಾಮದ ತೋಟದ ಮನೆಗೆ ಭೇಟಿ ನೀಡಿ, ಸುಹಾಸ್ ಶೆಟ್ಟಿ ಅವರ ತಂದೆ-ತಾಯಿ ಅವರಿಗೆ ಸಾಂತ್ವನ ಹೇಳಿ ರೂ.5 ಲಕ್ಷ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕರಾದ ಪಿ.ಜಿ.ಕೆಂಗನಾಳ, ಉಮೇಶ ಕೋರೆ, ಯಲಗೊಂಡ ಬಾಗಾದಿ, ಮುಖಂಡರಾದ ದಾದಾಸಾಹೇಬ ಬಾಗಾಯತ, ಸಚಿನ ಕೋರಿ ಸೇರಿದಂತೆ ಸ್ಥಳೀಯ ಹಿಂದೂ ಮುಖಂಡರು, ಕಾರ್ಯಕರ್ತರು ಉಪಸ್ಥಿತ ರಿದ್ದರು.


















