ಮುದ್ದೇಬಿಹಾಳ| ಬಾರಿ ಗಾಳಿ ಮಳೆಗೆ ಅಪಾರ ಹಾನಿ..!
ಬಾರಿ ಮಳೆ ಸುರಿದ ಪರಿಣಾಮ ರೈತ ಬೆಳೆದ ಈರುಳ್ಳಿಗೆ ಹಾನಿ, ಬಾರಿ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು ದವಸ ಧಾನ್ಯಗಳು ಹಾನಿ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ:ತಾಲ್ಲೂಕಿನ ರೂಢಗಿ ಗ್ರಾಮದಲ್ಲಿ ಸಾಯಂಕಾಲ ನಾಲ್ಕು ಗಂಟೆಯ ಸುಮಾರಿಗೆ ಸುರಿದ ವಿಪರೀತ ಆನೇಕಲ್ಲಿನ ಮಳೆ ಗಾಳಿಯಿಂದ ರುದ್ರಪ್ಪ ಪತ್ತಾರ ಎಂಬ ರೈತ ಬೆಳೆದ ಈರುಳ್ಳಿ ಸಂಗ್ರಹದ (ಬಳತ) ಪತ್ರಾಸುಗಳು ಹಾರಿ ಸುಮಾರು 6 ಲಕ್ಷ ಮೌಲ್ಯದ ಈರುಳ್ಳಿಯಲ್ಲಿ ನೀರು ಹೋಗಿ ನಷ್ಟವಾಗಿದೆ ಅದೃಷ್ಟವಶಾತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದರು. ಸುಮಾರು ಈ ಗ್ರಾಮದಲ್ಲಿ ಶಿವು ವಡ್ಡರ, ರುದ್ರ ಮೆಣಸಿನಕಾಯಿ ಹೀಗೆ ಹಲವಾರು ರೈತರ ಈರುಳ್ಳಿ ಬಿರುಗಾಳಿಯ ಮಳೆಯಿಂದ ಹಾನಿಯಾಗಿದೆ.
ರೂಢಗಿ ಗ್ರಾಮದಲ್ಲಿ ಮತ್ತು ತಾಂಡಾದ ತಾರಾಭಾಯಿ ಅಶೋಕ ಪವಾರ ಎಂಬವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು ದವಸ ಧಾನ್ಯಗಳು ಹಾನಿಗೀಡಾಗಿದ್ದು ಮನೆಯ ಸದಸ್ಯರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ತಕ್ಷಣ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸರಕಾರದಿಂದ ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮದ ನೊಂದ ಮನೆಯ ನಿವಾಸಿ ತಾರಾಭಾಯಿ ಅಶೋಕ ಪವಾರ ಮತ್ತು ರೈತರಾದ ರಾಗು ರುದ್ರಪ್ಪ ಪತ್ತಾರ ಅವರು ಪತ್ರಿಕೆಗೆ ತಮ್ಮ ಅಳಲನ್ನು ತೋಡಿಕೊಂಡರು.
ಗ್ರಾಮದಲ್ಲಿ ರೈತ ಬೆಳೆದ ಈರುಳ್ಳಿ ಸಂಗ್ರಹದ ಪತ್ರಾಸು,ಮತ್ತು ಹಲವು ಮನೆಗಳ ಮೇಲ್ಚಾವಣಿ ಕುಸಿತ ಹಾಗೂ ಸುಮಾರು 4 ಕಕ್ಕು ಹೆಚ್ಚು ವಿದ್ಯುತ್ ಕಂಬಗಳು ಗಾಳಿಯ ರಭಸಕ್ಕೆ ಮರಗಳು ಬಿದ್ದು ಕಂಬಗಳು ಹಾನಿಗೀಡಾಗಿವೆ ಎಂದು ಲೈನ್ ಮ್ಯಾನ್ ಗುರು, ನಭೀ ಅವರು ಮಾದ್ಯಮದರಿಗೆ ಮಾಹಿತಿ ತಿಳಿಸಿದ್ದಾರೆ.