ಮುದ್ದೇಬಿಹಾಳ :ಶತಮಾನಗಳಿಂದಲೂ ಸ್ಥಳಿಯ ಮುಸ್ಲಿಂರೊಂದಿಗೆ ದೇಶಮುಖ-ನಾಡಗೌಡರ ಅವಿನಾಭಾವ ಸಂಭಂದಗಳಿವೆ ಈಗಾಗಿ ಇದೇ ಸಂಬಂಧಗಳನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಸಮಾಜದ ಏಳ್ಗೆಯತ್ತ ಹೆಚ್ಚು ನಿಗಾ ಇರಲಿ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ತಾಲ್ಲೂಕಿನ ನಾಲತವಾಡ ಪಟ್ಟಣದ ಅಂಜುಮನ್ ಸಮೀತಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ೨೦೧೫-೧೬ನೇ ಸಾಲಿನ ೩೦ ಲಕ್ಷ ಹಾಗೂ ಪ್ರಸಕ್ತ ಸಾಲಿನ ಸುಮಾರು ೪೦ ಲಕ್ಷ ಒಟ್ಟು ೭೦ ಲಕ್ಷ ವೆಚ್ಚದ ಶಾದಿಮಹಲ್‌ನ ಮೇಲ್ಮಹಡಿ ಹಾಲ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ರಾಜಕೀಯ ಶಾಸ್ವತವಲ್ಲ, ಪಟ್ಟಭದ್ರ ವಿರೋಧಿಗಳ ತಂತ್ರಗಳಿಗೆ ಬಾಂಧವ್ಯಗಳನ್ನು ಕಳಚಿಕೊಳ್ಳಬೇಡಿ, ತಾವು ದೇಶಮುಖ ನಾಡಗೌಡ ಮನೆತನದ ಮನೆಯ ಮಕ್ಕಳಂತೆ ನಮಗೆ ಶಕ್ತಿ ತುಂಬಿದ್ದಿರಿ ನಿಮ್ಮಲ್ಲಿ ಒಗ್ಗಟ್ಟಿದೆ ಎಂದರು. ಶಾದಿಮಹಲ್ ಕಾಮಗಾರಿಗೆ ಇನ್ನೂ ಹೆಚ್ಚಿನ ಅನುದಾನ ನೀಡುತ್ತೇನೆ ನಿಮ್ಮ ಕಲ್ಯಾಣಕ್ಕೆ ಕಾಂಗ್ರೇಸ್ ಸರಕಾರ ಸಿದ್ದವಿದೆ ಎಂದರು.
ಒಗ್ಗಟ್ಟಿನಿಂದ ಸಂಖ್ಯೆ ಹೆಚ್ಚಳ: ರಾಜ್ಯದಲ್ಲಿ ಇತ್ತೀಚಿಗೆ ನಡೆದ ಜಾತಿ ಜನ ಗಣತಿಯಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿದೆ ಇದನ್ನು ನಾನು ಒಪ್ಪಿಸುಕೊಳ್ಳುತ್ತೇನೆ ಏಕೆಂದರೆ ನಿಮ್ಮಲ್ಲೂ ಸಹ ಹಲವು ಜಾತಿಗಳಿದ್ದರೂ ತಾವು ದಾಖಲೆಗಳಲ್ಲಿ ಇಸ್ಲಾಂ ಧರ್ಮ ಎಂದು ದಾಖಲಿಸುತ್ತೀರಿ ಇದು ನಿಮ್ಮ ಒಗ್ಗಟ್ಟಿನ ಮಂತ್ರ ಎಂದ ಅವರು ರಾಜ್ಯದಲ್ಲಿ ಎಲ್ಲರೂ ಸೇರಿ ಹಿಂದೂ ಎಂದು ದಾಖಲಿಸಿದ್ದಲ್ಲಿ ಹಿಂದೂ ಜನಸಂಖ್ಯೆ ಏರಿಕೆ ಕಂಡು ಬರುತ್ತಿತ್ತು ಆದರೆ ನಮ್ಮ ಹಿಂದು ಜನರು ಸುಮಾರು ಜಾತಿಗಳನ್ನು ಭಿನ್ನ ಭಿನ್ನವಾಗಿ ತೋರಿಸಿದ ಪರಿಣಾಮ ಹಿಂದೂ ಜನ ಸಂಖ್ಯೆಯಲ್ಲಿ ಕುಂಠಿತಗೊಳ್ಳಲು ಕಾರಣ ಎಂದರು.
ಸನ್ಮಾನ:ಅನುದಾನ ನೀಡಿದ ಶಾಸಕ ಸಿ.ಎಸ್.ನಾಡಗೌಡ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪ್ರಶಾಂತ ಪೂಜಾರಿ ಅವರನ್ನು ಎಲ್.ಎಚ್.ಅವಟಿಯವರು ಸಮೀತಿಯಿಂದ ಸನ್ಮಾನಿಸಲಾಯಿತು.
ಮನವಿ:ಇದೇ ವೇಳೆ ಸಂಗಣ್ಣ ತಾತರಡ್ಡಿ ಸೇರಿ ಹಲವರು ಶಾಸಕ ನಾಡಗೌಡ ಅವರಿಗೆ ಪಟ್ಟಣದಲ್ಲಿ ಮಿನಿ ಸಾರಿಗೆ ಘಟಕ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಂಜುಮನ್ ಸಮೀತಿ ಸದಸ್ಯರಾದ ಮೌಲಾಸಾಬ ರಕ್ಕಸಗಿ ಪ್ರಸ್ತಾವೀಕವಾಗಿ ಮಾತನಾಡಿದ್ದು ಶಾಸಕ ನಾಡಗೌಡ ಅವರು ಸತತ ಸ್ಥಳಿಯ ಮುಸ್ಲಿಂರ ಕಣ್ಮಣಿಯಾಗಿ ನಮ್ಮ ಹಿತ ಕಾಪಾಡಿದ್ದು ನಮ್ಮ ಸಮಾಜಕ್ಕೆ ಬೇಡಿಕೆಗಳನ್ನು ಹಿಡೇರಿಸಿದ್ದಾರೆ, ನಾವೆಂದಿಗೂ ಅವರ ಬೆನ್ನೆಲುಬು ಎಂದರು.
ಈ ಸಂದರ್ಭದಲ್ಲಿ ಗುರುಪ್ರಸಾದ್ ದೇಶಮುಖ, ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಇಲಕಲ್, ಉಪಾಧ್ಯಕ್ಷ ಬಸವರಾಜ ಗಂಗನಗೌಡ, ಅಂಜುಮನ್ ಸಮೀತಿ ಅಧ್ಯಕ್ಷ ಎಲ್.ಎಚ್.ಅವಟಿ, ಬಾಷೇಸಾಬ ತೆಗ್ಗಿನಮನಿ, ಗ್ಯಾರಂಟಿ ಸಮೀತಿ ತಾಲೂಕಾಧ್ಯಕ್ಷ ಶಂಕರಗೌಡ ಹಿರೇಗೌಡ, ಶಿವಪ್ಪಗೌಡ ತಾತರಡ್ಡಿ, ಜುಮ್ಮಣ್ಣ ಜೋಗಿ, ಅಬ್ದುಲಗನಿ ಖಾಜಿ, ಇಬ್ರಾಯಿಂ ಮುಲ್ಲಾ, ಸಂಗಣ್ಣ ಮುರಾಳ, ರಾಯನಗೌಡ ತಾತರಡ್ಡಿ, ಈರಣ್ಣ ಮುದ್ನೂರ,ಡಾ.ಬಲವಂತ ಉಣ್ಣಿಬಾವಿ ಇದ್ದರು.
ಯೂನೂಷ್ ಮೂಲಿಮನಿ, ಬಸವರಾಜ ಹುಡೇದ, ಬರಕತಲಿ ಸುಲ್ತಾನಪೂರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.