ಲಿಂಬೆನಾಡಿಗೆ ಜಿಟಿಟಿಸಿ ಕಾಲೇಜು ಮಂಜೂರಿ – ಶಾಸಕ ಪಾಟೀಲ
ಇಂಡಿ : ರಾಜ್ಯದ ಮುಖ್ಯಮಂತ್ರಿಯವರು ಬಜೆಟಿನಲ್ಲಿ ಇಂಡಿಗೆ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವನ್ನು ನೂತನವಾಗಿ ನೀಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಕರ್ನಾಟಕ ಸರಕಾರ ಮತ್ತು ಡೆನ್ಮಾರ್ಕ ಸರಕಾರ ಜೊತೆಗೂಡಿ ಈಗಾಗಲೇ ರಾಜಾಜಿನಗರದಲ್ಲಿ ಪ್ರಾರಂಭಿಸಿದ್ದು ಮೈಸೂರದಲ್ಲಿಯೂ ಇದೆ. ಈಗ ಎರಡು ಜಿಟಿಟಿಸಿ ಕಾಲೇಜು ನೀಡಿದ್ದು ಮಧುಗಿರಿ ಮತ್ತು ಇಂಡಿಗೆ ಕಾಲೇಜು ನೀಡಿದ್ದಾರೆ. ಎಸ್ಸೆಸ್ಸೆಲ್ಸಿ ಮುಗಿದ ನಂತರ ನಾಲ್ಕು ವರ್ಷದ ಕೋರ್ಸು ಇದಾಗಿದ್ದು ವಿದ್ಯಾರ್ಥಿಗಳಿಗೆ ಸುಲಭವಾಗಿ ನೌಕರಿ ಪಡೆಯಲು ಅವಕಾಶವಿದೆ ಎಂದರು.
ರೇವಣಸಿದ್ದೇಶ್ವರ ನೀರಾವರಿ ಯೋಜನೆ ಬಜೆಟ್ಟಿನಲ್ಲಿ ಎರಡು ಮತ್ತು ಮೂರನೆಯ ಹಂತದ ಕಾಮಗಾರಿಗೆ ರೂ ೩೦೦೦ ಕೋಟಿ ಬಜೆಟ್ಟಿನಲ್ಲಿ ನೀಡಿದ್ದಾರೆ. ಅದಲ್ಲದೆ ಕೃಷ್ಣಾ ಮೇಲ್ದಂಡೆ ಯೋಜನೆಯ ಆಣೆಕಟ್ಟಿನ ಎತ್ತರ ೫೨೪ ಮೀ ಗೂ ಸಹಕಾರ ನೀಡಿ ಯೋಜನೆ ಪೂರ್ಣ ಗೊಳಿಸಲು ಅಶ್ವಾಸನೆ ನೀಡಿದ್ದಾರೆ ಎಂದರು.

ಶ್ರೀ ರೇವಣ ಸಿದ್ದೇಶ್ವರ ಕಾಮಗಾರಿ ಮುಗಿದರೆ ಇಂಡಿ ಮತ್ತು ಚಡಚಣ ತಾಲೂಕಿನ ೨೮೦೦೦ ಹೇಕ್ಟರ್ ಪ್ರದೇಶಕ್ಕೆ ನೀರು ಬರಲಿದೆ. ಅದರಲ್ಲಿ ಇಂಡಿಗೆ ೨೧೦೦೦ ಹೇ ಮತ್ತು ಚಡಚಣದ ೭೦೦೦ ಹೇಕ್ಟರ ಪ್ರದೇಶ ನೀರಾವರಿಯಾಗಲಿದೆ ಎಂದರು.
ಪAಡರಪೂರ ಗಾಣಗಾಪುರ ರಾಜ್ಯ ಹೆದ್ದಾರೆಗೆ ಬಜೆಟಿನಲ್ಲಿ ಅನುದಾನ ನೀಡಿದ್ದಾರೆ ಇದು ಇಂಡಿಯ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾಗಲಿದೆ. ಈಗಾಗಲೇ ಅಕ್ಕಲಕೋಟ ವಿಜಯಪುರ, ಸೋಲಾಪುರ ವಿಜಯಪುರ, ಶಿರಾಡೋಣ ಲಿಂಗಸಗೂರ ರಾಷ್ಟೀಯ ಹೆದ್ದಾರೆ ಕಾರ್ಯ ನಡೆದಿದ್ದು ಹೆದ್ದಾರೆಗಳಿಂದ ನಗರಕ್ಕೆ ಅನುಕೂಲವಾಗಲಿದೆ ಎಂದರು.
ಸಕ್ಕರೆ ಕಾರ್ಖಾನೆಗೆ ೭೦ ಕೋಟಿ ರೂ ಕಬ್ಬು ಕಟ್ಟಿಂಗ ಮಾಡಲು ಧನ ಸಹಾಯ ಮತ್ತು ಇಂಡಿ ನಿಂಬೆಗೆ ಜಿ.ಐ ಟ್ಯಾಗ ಬಂದಿದ್ದು ನಿಂಬೆ ಬೆಳೆಗಾರರಿಗೆ ಜಿ.ಐ ಟ್ಯಾಗ ಅವಿಷ್ಕಾರಕ್ಕೆ ಬಜೆಟಿನಲ್ಲಿ ಹಣ ನೀಡಿದ್ದಾರೆ ಅದಕ್ಕಾಗಿ ಸರಕಾರ ಮತ್ತು ಮುಖ್ಯಮಂತ್ರಿಗಳನ್ನು ಅಭಿನಂದಿಸುವದಾಗಿ ತಿಳಿಸಿದರು.
ಇಂಡಿ : ಯಶವಂತರಾಯಗೌಡ ಪಾಟೀಲರ



















