ಅಹಿಲ್ಯಾದೇವಿ ಹೂಳ್ಕರ್ ಶಿಕ್ಷಣ ಸಂಸ್ಥೆಯಲ್ಲಿಬಡ ಅನಾಥ ಮಕ್ಕಳಿಗೆ ಊಟ ವಸತಿ ಸಹಿತ ಉಚಿತ ಶಿಕ್ಷಣ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ;ನಮ್ಮ ಅಹಿಲ್ಯಾದೇವಿ ಹೂಳ್ಕರ್ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ ಬಡ ಅನಾಥ ಮಕ್ಕಳಿಗೆ ಊಟ ವಸತಿ ಸಹಿತ ಉಚಿತ ಶಿಕ್ಷಣವನ್ನು ನೀಡುತ್ತೇವೆ ಎಂದು ಅಹಿಲ್ಯಾದೇವಿ ಹೂಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಿಕ್ಷಣ ಪ್ರೇಮಿ ಮಲ್ಲಿಕಾರ್ಜುನ ಮದರಿ ಹೇಳಿದರು ರವಿವಾರ ಪಟ್ಟಣದ ಹೂಳ್ಕರ್ ಕಾಲೋನಿ ಅಭ್ಯುದಯ ಶಿಕ್ಷಣ ಸಂಸ್ಥೆಯಲ್ಲಿ ೫ ಮತ್ತು ೬ ನೇ ತರಗತಿಯ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಪರೀಕ್ಷೆ ಸಮಾರಂಭ ಉದ್ದೇಶಿಸಿ ಮಾತನಾಡಿದರು .
ಅಹಿಲ್ಯಾದೇವಿ ಹೂಳ್ಕರ್ ಶಿಕ್ಷಣ ಸಂಸ್ಥೆ ಅಡಿಯ ಮುದ್ದೇಬಿಹಾಳ,ಕೋಳೂರು ಅಡವಿಹುಲಗವಾಳ ಈ ಮೂರು ಶಾಲೆಯ ಸ್ಕಾಲರ್ಶಿಪ್ ಎಕ್ಸಾಂ ಮುದ್ದೇಬಿಹಾಳ ಶಾಲೆಯಲ್ಲಿ ಏರ್ಪಡಿಸಲಾಗಿತ್ತು ೫ ನೇ ತರಗತಿಯ ಒಟ್ಟು 446 ವಿದ್ಯಾರ್ಥಿಗಳು ಹಾಗೂ ೭ ತರಗತಿ ಒಟ್ಟು 493 ವಿದ್ಯಾರ್ಥಿಗಳು (ಮೂರು ಶಾಲೆಗಳಿಗೆ ಸೇರಿದಂತೆ) ೯೩೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ .
ಅಹಿಲ್ಯಾದೇವಿ ಹೂಳ್ಕರ್ ಶಿಕ್ಷಣ ಸಂಸ್ಥೆ ಅಡಿಯ ಮೂರು ಶಾಲೆಗಳಲ್ಲಿ ಪರೀಕ್ಷೆ ಬರೆದ ೫& ೭ ತರಗತಿ ವಿದ್ಯಾರ್ಥಿಗಳಲ್ಲಿ ಪ್ರತಿ ಶಾಲೆಗೆ ತಲಾ ಟಾಪ್ ಟೆನ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಮೊದಲ 5 ಟಾಪ್ ವಿದ್ಯಾರ್ಥಿಗಳು ( ೩೦ ವಿದ್ಯಾರ್ಥಿಗಳಿಗೆ ಊಟ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತದೆ ಅಂತಯೇ ಟಾಪ್ 6 ರಿಂದ ಟಾಪ್ ೧೦ ಬಂದಂತಹ ೩೦ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ ಪರೀಕ್ಷೆ ಬರೆದ ೫&೭ ತರಗತಿಯ ವಿದ್ಯಾರ್ಥಿಗಳಲ್ಲಿ ೩೦ ವಿದ್ಯಾರ್ಥಿಗಳು ಊಟ ವಸತಿ ಸಹಿತ ಉಚಿತ ಶಿಕ್ಷಣ ಉಳಿದ 30 ವಿದ್ಯಾರ್ಥಿಗಳು ಊಟ ವಸತಿ ರಹಿತ ಉಚಿತ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ ಇದರಲ್ಲಿ ಅಡವಿ ಹುಲಗಬಾಳ ಶಾಲೆಗೆ ಪರೀಕ್ಷೆ ಬರೆದು ೨೪ ಅಂಕಗಳನ್ನು ಪಡೆದ ನಾಲ್ಕು ವಿದ್ಯಾರ್ಥಿಗಳನ್ನು ಹಾಗೂ ಕೋಳೂರಿನಲ್ಲಿ 23 ಅಂಕಗಳನ್ನು ಪಡೆದ ಒಂದು ವಿದ್ಯಾರ್ಥಿ ಒಟ್ಟು ಹೆಚ್ಚುವರಿಯಾಗಿ ೫ ವಿದ್ಯಾರ್ಥಿಗಳು ಮತ್ತು ಯರಗಲ್ ಗ್ರಾಮದ ಅನಾಥ ವಿದ್ಯಾರ್ಥಿ ಗುರುಮೂರ್ತಿ ಹಿರೇಮಠ ಸೇರಿ ೬೫ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಆಯ್ಕೆ ಮಾಡಲಾಗಿದೆ
ಆಡಳಿತ ಅಧಿಕಾರಿ ಬಿ ಜಿ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು ಈ ವೇಳೆ ಮೂರು ಶಾಲೆಗಳ ಮುಖ್ಯ ಗುರುಗಳಾದ ಹೆಚ್ ಬಿ ಜಾಯವಾಡಗಿ, ಬಿ ಕೆ ಪೂಜಾರಿ ರಮೇಶ ಹರನಾಳ, ಬಸವರಾಜ ಬಿಜ್ಜೂರ ಸಂಸ್ಥೆ ನಿರ್ದೇಶಕ ಕಿರಣ್ ಮದರಿ ಸೇರಿದಂತೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು.
ಪಟ್ಟಣದ ಹೂಳ್ಕರ್ ಕಾಲೋನಿ ಅಭ್ಯುದಯ ಶಿಕ್ಷಣ ಸಂಸ್ಥೆಯಲ್ಲಿ ೫ ಮತ್ತು ೬ ನೇ ತರಗತಿಯ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಪರೀಕ್ಷೆ ಸಮಾರಂಭ ಉದ್ದೇಶಿಸಿ ಅಹಿಲ್ಯಾದೇವಿ ಹೂಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಿಕ್ಷಣ ಪ್ರೇಮಿ ಮಲ್ಲಿಕಾರ್ಜುನ ಮದರಿ ಮಾತನಾಡಿದರು.