ಇಂಡಿ | ಪಿಂಚಣಿ ಅದಾಲತ್, ಎಸಿ ವಿನಯ ಪಾಟೀಲ ಅಭಿಮತ ಏನು ಗೊತ್ತಾ..?
ಇಂಡಿ: ಸರ್ಕಾರದ ಸೌಲಭ್ಯಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂಬ ಉದ್ದೇಶದಿಂದ ಸರ್ಕಾರ ಪಿಂಚಣಿ ಅದಾಲತ್ ಆಯೋಜಿಸಿದೆ ಎಂದು ಕಂದಾಯ ಉಪ ವಿಭಾಗಾಧಿಕಾರಿ ವಿನಯ ಪಾಟೀಲ ಹೇಳಿದರು.
ಶನಿವಾರ ತಾಲೂಕಿನ ಬರಗುಡಿ ಗ್ರಾಮದಲ್ಲಿ ಆಯೋಜಿಸಿದ ಪಿಂಚಿಣ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಸಮಾಜದ ಯಾವುದೇ ಕೆಲಸವಿರಲಿ ಮಾಡುವುದು ಮತ್ತು ಸಮಾಜದಲ್ಲಿ ಕಡೆಗಣ ಸಲ್ಪಟ್ಟವರಿಗೂ ನ್ಯಾಯ ದೊರಕಿಸಿಕೊಡುವ ಕೆಲಸ ಹಾಗೂ ಅಂಗವಿಕಲರಿಗೆ, ಸಂಧ್ಯಾಸುರಕ್ಷಾ ಯೋಜನೆ, ವಿಧವಾ ವೇತನ, ಬುದ್ದಿಮಾಂದ್ಯ, ಅಂಗವೈಕಲ್ಯ ಹೊಂದಿದವರಿಗೆ ಮಾಸಾಶನ ಸೇರಿದಂತೆ ಅನೇಕ ಕೆಲಸ ಕಾರ್ಯಗಳಿಗೆ ಸರ್ಕಾರದ ವತಿಯಿಂದ ನಮ್ಮ ಇಲಾಖೆ ಸೇವೆ ಮಾಡಲು ಸದಾ ಸಿದ್ದವಿದೆ ಎಂದರು. ಬರಗುಡಿ ಹಾಗೂ ಇನ್ನು ಹಲವಾರು ಕಡೆಗಳಿಂದ ಫಲಾನುಭವಿಗಳು ಆಗಮಿಸಿದ್ದರು. ಇದೇ ವೇಳೆ ೭ ಅರ್ಹ ಫಲಾನುಭವಿಗಳಿಗೆ ವಿವಿಧ ವೇತನಗಳ ಆದೇಶ ಪ್ರತಿ ನೀಡಲಾಯಿತು.
ಝಳಕಿ ಉಪ ತಹಶಿಲ್ದಾರ ಎ.ಎಸ್.ಗೋಟ್ಯಾಳ, ಗ್ರಾಪಂ ಉಪಾಧ್ಯಕ್ಷೆ ಸೈನಜಾ ರತನ ಶಾ ಲಿಂಗಸೂರ, ಗ್ರಾಪಂ ಸದಸ್ಯರಾದ ಸುರೇಶ ಯಾದವಾಡ, ಭೀಮಶ್ಯಾ ವಾಲಿಕಾರ, ಆಹಾರ ನೀರಿಕ್ಷಕ ಪರಮಾನಂದ ಹೂಗಾರ, ಮಣ ಕಂಠ ಗೊಂದಳಿ, ಶ್ರೀಕಾಂತ ಪೂಜಾರಿ, ಸೋಮನಿಂಗ ಮದಗೊಂಡ ಪಾಟೀಲ, ಹುಸೇನಸಾಬ ಬಂದಗಿ ಪಟೇಲ, ವಿರೋಕ್ಷಯ್ಯ ವಸ್ತçದ ಸೇರಿದಂತೆ ಅನೇಕರು ಇದ್ದರು.
ಇಂಡಿ: ತಾಲೂಕಿನ ಬರಗುಡಿ ಗ್ರಾಮದಲ್ಲಿ ಆಯೋಜಿಸಿದ ಪಿಂಚಿಣ ಅದಾಲತ್ ಕಾರ್ಯಕ್ರಮದಲ್ಲಿ ವಿನಯ ಪಾಟೀಲ ಮಾತನಾಡಿದರು.



















