ಸಾಧನೆಗೆ ಗುರಿ ಸ್ಪಷ್ಟವಾಗಿರಬೇಕು : ಎಸಿ ಅಬೀದ್ ಗದ್ಯಾಳ
ಇಂಡಿ: ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಸತತ ಪ್ರಯತ್ನ ಮಾಡಿದರೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಇಂಡಿ ಉಪವಿಭಾಗಾಧಿಕಾರಿಗಳಾದ ಶ್ರೀ ಅಭಿದ್ ಗದ್ಯಾಳ ಹೇಳಿದರು.
ಅವರು ಇಂಡಿ ನಗರದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ವಿದ್ಯಾರ್ಥಿನಿಯರಾದ ನಿಮ್ಮ ಮೇಲೆ ಹೆಚ್ಚು ಜವಾಬ್ದಾರಿ ಇರುತ್ತದೆ ಆದ್ದರಿಂದ ನಿಮ್ಮ ತಂದೆ ತಾಯಿಗಳಿಗೆ ನಿಮ್ಮ ಕುಟುಂಬಕ್ಕೆ ಹಿತವೆನಿಸುವ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಇಂದಿನ ಸಮಾಜದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನವಾದ ಅವಕಾಶಗಳಿರುತ್ತವೆ. ನೀವು ಸಾಧನೆ ಮಾಡಬಹುದು ಆದರೆ ಜೀವನದಲ್ಲಿ ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಸಾಗಿ ಗುರಿ ತಲುಪುವವರೆಗೂ ಎಂತಹ ಕಠಿಣ ಪರಿಸ್ಥಿತಿ ಬಂದರು ದೃತಿಗಡದೆ ಮುಂದೆ ಸಾಗಬೇಕು ಆಗ ಮಾತ್ರ ನೀವು ಸಂಕಲ್ಪ ಮಾಡಿದ ಗುರಿ ತಲುಪಲು ಸಾಧ್ಯವಿದೆ ಎಂದರು.
ಈ ಶಾಲೆಯ ವಿದ್ಯಾರ್ಥಿನಿಯರು ರಾಜ್ಯೋತ್ಸವ ದಿನದಂದು ಮಾಡಿದ ಸಂಸ್ಕೃತಿಕ ನೃತ್ಯ ತುಂಬಾ ಪ್ರಶಂಷನೀಯವಾದದ್ದು ಹಾಗೆ ಅಭ್ಯಾಸದಲ್ಲಿಯೂ ನಿಮ್ಮ ಸಾಧನೆ ಇರಲಿ ಎಂದರು.
ಇದೆ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಶ್ರೀ ಡಿಆರ್ ಕೋರೆ ಶಿಕ್ಷಕರು ಮಾತನಾಡಿ ಇಂಡಿ ಉಪ ವಿಭಾಗದಲ್ಲಿ ಹಾಗೂ ಇಂಡಿ ನಗರದಲ್ಲಿ ಹಲವು ವರ್ಷಗಳಿಂದ ಆಗದಿರುವ ಕಾರ್ಯಗಳನ್ನು ಮಾಡಿ ಸಾಮಾನ್ಯ ಜನರಿಗೆ ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು ಎ ಎಚ್ ಹೊಸಮನಿ ಸಿಆರ್‌ಪಿ ಶ್ರೀಧರ್ ಹಿಪ್ಪರಗಿ, ಶಿಕ್ಷಕರಾದ ಎಸ್ ಎಸ್ ಕಾಂಬಳೆ, ಬಾಬಾನಗರ, ಎಂ ಎಂ ಲಕಡಾರ , ಎಂ ಡಿ ಶಿಂದೆ , ಎಸ್ ಆರ್ ಕನಮಡಿ , ಎಚ್ ಎಮ್ ಕುಲಕರ್ಣಿ, ಕೆ ಎಲ್ ಲಚ್ಯಾಣ, ಎಸ್ ಎಸ್ ಬಗಲಿ, ಎಸ್ ಎಮ್ ಬಾಸ್ ಗಿ, ಬಿ ಸಿ ಭಗವಂತಗೌಡರ, ಎಂ ಡಿ ದೊಡಮನಿ, ವಾಯ್ ಎಸ್ ಚಿಗರಿ, ಶ್ವೇತಾ ಕೊಂಡೆದ, ಅಶ್ವಿನಿ ಕಂಬಾರ್ ಉಪಸ್ಥಿತರಿದ್ದರು. ಶಿಕ್ಷಕರಾದ ಶ್ರೀ ಪಿ ಜಿ ಕಲ್ಮನಿ ನಿರೂಪಿಸಿ ವಂದಿಸಿದರು.


















