ಪಿಕೆಪಿಎಸ್ ನಲ್ಲಿ ಅಕ್ರಮ ನಡೆದಿಲ್ಲ..! ದಾಖಲೆ ರಹಿತ ಆರೋಪ, ಸತ್ಯಕ್ಕೆ ದೂರು : ಪ್ರಭು ಹೊಸಮನಿ
ಇಂಡಿ : ತಾಲ್ಲೂಕಿನ ಇಂಗಳಗಿ ಪಿಕೆಪಿಎಸ್ ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಎಲ್ಲವೂ ಶಾಸನಬದ್ಧವಾಗಿಯೆ ನಡೆಯುತ್ತಿದೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ದಾಖಲೆ ರಹಿತವಾಗಿ ಏನ ಏನೋ ಆರೋಪ ಮಾಡುತ್ತೀರುವುದು ಕಂಡರೆ, ಕೃಷಿ ಪತ್ತಿನ ಸಹಕಾರಿ ಸಂಘದ ಬೆಳವಣಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಪ್ರಭು ಹೊಸಮನಿ ಕಿಡಿಕಾರಿದರು.
ಬುಧವಾರ ಪಟ್ಟಣದ ಖಾಸಗಿ ಹೊಟೆಲ್ ಯೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇಂಗಳಗಿ ವ್ಯವಸಾಯ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಎಲ್ಲವೂ ಶಾಸನಬದ್ಧವಾಗಿದೆ. ವಾರ್ಷಿಕ ಸಭೆ ಸೇರಿದಂತೆ ಸಂಘದ ಎಲ್ಲಾ ಚಟುವಟಿಕೆಗಳು ಕಾನೂನು ಅಡಿಯಲ್ಲಿಯೇ ನಡೆದಿವೆ. ಅದಲ್ಲದೆ ಚುನಾವಣೆ ಎಲ್ಲಾ ಪ್ರಕ್ರಿಯೆಗಳು ಇಲಾಖೆಯ ಜಿಲ್ಲಾ ಅಧಿಕಾರಿ ಮಾರ್ಗಸೂಚಿಯಲ್ಲಿಯೇ ನಡೆಯುತ್ತಿದೆ ಎಂದು ಹೇಳಿದರು.
ಇನ್ನೂ ಸಂಘದ ಕಾರ್ಯದರ್ಶಿ ಅವರ ಕಣ್ಣತಪ್ಪಿನಿಂದ ಕಿರು ತಪ್ಪುಗಳಾಗಿದ್ದು, ಅವುಗಳನ್ನು ಈಗಾಗಲೇ ತಿದ್ದುಪಡಿ ಮಾಡಿ ಸರಿಪಡಿಸಲಾಗಿದೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭು ವಾಲಿಕಾರ್, ಹುಸೇನ್ ಸಾಬ್ ಆಹಿರ ಸಂಘ, ಉಮೇಶ್ ಚೌಹಾಣ, ಅಣ್ಣಪ್ಪ ಅಹಿರಸಂಘ ಸೇರಿದಂತೆ ಇನ್ನಿತರರು ಇದ್ದರು.


















