ಮುದ್ದೇಬಿಹಾಳ ; ಕಳೆದ ಹತ್ತು ದಿನಗಳಿಂದ ಗ್ರಾಮ ಆಡಳಿತಾಧಿಕಾರಿಗಳು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ಮಾಡುತ್ತಿದ್ದರು ರಾಜ್ಯ ಸರಕಾರ ಯಾವುದೇ ರೀತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಬದಲಾಗಿ ನಮ್ಮ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ನಾಯ್ಕೂಡಿ ಹೇಳಿದರು ಮುದ್ದೇಬಿಹಾಳ ಆಡಳಿತ ಸೌಧ ಎದರು ಕಳೆದ ಹತ್ತು ದಿನಗಳಿಂದ ಮುದ್ದೇಬಿಹಾಳ ತಾಳಿಕೋಟೆ ಗ್ರಾಮ ಆಡಳಿತ ಅಧಿಕಾರಿಗಳ ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಮಾಧ್ಯಮ ಜೊತೆ ಅವರು ಮಾತನಾಡಿದರು ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ನಮ್ಮ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯಕ ಅವರನ್ನು ಸರಕಾರದ ಯೋಜನೆಗಳನ್ನು ವಿರೋಧಿಸುತ್ತಿದ್ದಾರಂತ ಅವರನ್ನು ಅಮಾನತ್ತು ಮಾಡಿ ಅವರ ಮೇಲೆ ಎಫ್ಐಆರ್ ದಾಖಲಿಸಲು ಆದೇಶ ಮಾಡಿದೆ
ಸರಕಾರಕ್ಕೆ ನಮ್ಮ ಹೋರಾಟದ ಬಗ್ಗೆ ಸಾರ್ವಜನಿಕರ ಬಗ್ಗೆ ರೈತರ, ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಯೋಚಿಸುತ್ತಿಲ್ಲಾ ನಮ್ಮ ಹೋರಾಟ ನಿಶ್ಚಲವಾಗಿದೆ ಸರಕಾರ ಎಲ್ಲಾ ಗ್ರಾಮಾಡಳಿತಾಧಿಕಾರಿಗಳನ್ನು ಸಸ್ಪಂಡ್ ಮಾಡಲಿ ಎಲ್ಲರ ಮೇಲೆ ಎಫ್ ಐ ಆರ್ ದಾಖಲಿಸಲಿ ನಾವು ಗಟ್ಟಿಯಾಗಿದ್ದೇವೆ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗುವವರಗೆ ನಿರಂತರವಾಗಿ ಹೋರಾಟ ಮುಂದುವರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಡಳಿತಾಧಿಕಾರಿಗಳ ಜಿಲ್ಲಾಧ್ಯಕ್ಷ್ಯ ಗಂಗಾಧರ ಜೂಲಗುಡ್ಡ, ತಾಲೂಕ ಅಧ್ಯಕ್ಷ ಮನೋಜ ರಾಠೋಡ, ಶಬ್ಬಿರ ಮುಲ್ಲಾ, ಅರ್ ಎಸ್ ಹೊಸೂರ,ಸುನಿಲ್ ರಾಠೋಡ, ಎ.ಎಸ್ ಬಾಗವಾನ, ಶ್ರೀನಿವಾಸ ಹುನಗುಂದ, ಶಿವಶರಣ ಕುಂಬಾರ, ದೇವರಾಜ, ಗುರಿಕಾರ, ಕುಮಾರ ಆಲಗೂರ, ಪ್ರಕಾಶ ಹೊಸಕೇರಿ, ಯಮನಪ್ಪ ಮಾದರ, ಪವನ ಬೆಂಕಿ,ಎ ವಿ ಮಠ,ಸಂಗಪ್ಪ ಮೇಟಿ, ಆರತಿ ಬಳವಾಟ, ಅನುಪಮ ಪೂಜಾರ, ಗಂಗಮ್ಮ ಕುಂಬಾರ, ಕಾವ್ಯ ಮುಲ್ಲಾಳ, ಶಿವಾನಂದ ಅಂಗಡಿ, ಶೈಲಶ್ರೀ ಕಂಚ್ಯಾಣಿ, ಕಿಶೋರ ಹಜೇರಿ, ಶೃತಿ ಡಂಬಳ, ಸೇರಿದಂತೆ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನ ಗ್ರಾಮಾಡಳಿತಾಧಿಕಾರಿಗಳ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.