ಬಂಜಾರ ಸಮುದಾಯದ ಸಂತ ಸೇವಾಲಾಲ ಶ್ರೇಷ್ಠರು
ಇಂಡಿ : ಸೇವಾಲಾಲ್‌ರು ಯೋಗಿಯಾಗಿ, ಮಹಾಸಂತರಾಗಿ ಲೋಕಕಲ್ಯಾಣಕ್ಕಾಗಿ ದೇಶದಾದ್ಯಂತ ಸಂಚರಿಸಿ ತನ್ನನ್ನು ನಂಬಿದ ಭಕ್ತರನ್ನು ಉದ್ಧಾರಪಥದತ್ತ ಮುನ್ನಡೆಸಿದ್ದಾರೆ ಎಂದು ಇಂಡಿ ತಾಲೂಕಾ ಬಂಜಾರಾ ಸಮಾಜದ ಅಧ್ಯಕ್ಷ ಸಂಜು ಚವ್ಹಾಣ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ಸಂತ ಸೇವಾಲಾಲರ ೨೮೬ ನೆಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಮಾತನಾಡಿ ಭಾರತದ ನೆಲದಲ್ಲಿ ಮಹಾನ ಸಂತರು ಗಳಲ್ಲಿ ಲಂಬಾಣ ಸಮುದಾಯದ ಸೇವಾಲಾಲರು ಶ್ರೇಷ್ಠರು ಎಂದರು.
ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ ದೇರ, ಉಪನ್ಯಾಸಕ ವಿಜಯಕುಮಾರ ರಾಠೋಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಆರ್.ಮುಜಗೊಂಡ, ವೆಂದ್ರ ಕುಂಬಾರ, ಸಂಜು ರಾಠೋಡ, ಸಂಜು ಜಾಧವ, ಡಾ|| ಕಮಲಾಕರ ದೇಸಾಯಿ, ಧರ್ಮರಾಜ ರಾಠೋಡ, ಮಲ್ಲು ರಾಠೋಡ, ವಿಜಯ ಪವಾರ, ಜಯರಾಮ ರಾಠೋಡ, ವಿಶ್ವನಾಥ ರಾಠೋಡ, ಹರಿಶ್ಚಂದ್ರ ಪವಾರ, ಮೋಹನ ರಾಠೋಡ ಮತ್ತಿತರಿದ್ದರು.


















