ಇಂಡಿ | ಸರಕಾರಿ ಭೂಮಾಪಕರ ಮೇಲೆ ಹಲ್ಲೆ..!
ಇಂಡಿ : ಸರಕಾರಿ ರಸ್ತೆ ಅಳತೆ ಮಾಡಲು ತೆರಳಿದ ಭೂಮಾಪಕರ ಮೇಲೆ ಹಲ್ಲೆ ನಡೆದ ಘಟನೆ ನೂತನ ಚಡಚಣ ತಾಲ್ಲೂಕಿನ ಲೋಣಿ ಬಿ.ಕೆ ಗ್ರಾಮದಲ್ಲಿ ನಡೆದಿದೆ.
ಚಡಚಣ ತಹಶಿಲ್ದಾರ ಆದೇಶದ ಮೇರೆಗೆ ಲೋಣಿ ಬಿ.ಕೆ ಗ್ರಾಮದಿಂದ ಜೇವೂರ ರಸ್ತೆಯ ಮಾರ್ಗದ ಅಳತೆ ಮಾಡುವಾಗ ಕೆಲಸಕ್ಕೆ ಅಡ್ಡಿ ಪಡಿಸಿ ಏಕಾ-ಏಕಿ ಭೂಮಾಪಕ ಮಹಾಂತಪ್ಪ ಶ್ರೀಶೈಲ ಎಂಬುವರ ಮೇಲೆ ವಿಕಾಸ ಪಾಟೀಲ ಹಾಗೂ ಇತರರು ಸೇರಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅವರನ್ನು ಈ ಸದ್ಯ ಇಂಡಿ ತಾಲ್ಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ತರಲಾಗಿದೆ. ಈ ಘಟನೆ ಝಳಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


















