ಇಂಡಿ | ರಾತ್ರಿ ಸಿಂಗಲ್ ಫೇಜ ವಿದ್ಯುತ್ ಆಗ್ರಹಿಸಿ ಪ್ರತಿಭಟನೆ
ಇಂಡಿ : ಹಗಲು ಹೊತ್ತು ಕೃಷಿಗೆ ಏಳು ತಾಸು ವಿದ್ಯುತ್ ಆಗ್ರಹಿಸಿ ಮತ್ತು ರಾತ್ರಿ ವೇಳೆ ಗ್ರಾಮಗಳಿಗೆ ಸಿಂಗಲ್ ಫೇಜ್ ವಿದ್ಯುತ್ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಡಿಯಲ್ಲಿ ಹೆಸ್ಕಾಂ ಎಇಇ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ ರಾತ್ರಿ ವೇಳೆ ಗ್ರಾಮಗಳಿಗೆ ವಿದ್ಯುತ ನೀಡುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಓದಬೇಕಂದರೆ ವಿದ್ಯುತ್ ಇಲ್ಲದೆ ತೊಂದರೆ ಯಾಗುತ್ತದೆ. ಅದಲ್ಲದೆ ಇತ್ತ ಘಾಸಲೇಟ ಎಣ್ಣೆ ದೊರೆಯುತ್ತಿಲ್ಲ ಮತ್ತು ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳು ಓದಿನಿಂದ ವಂಚಿತರಾಗುತ್ತಿದ್ದಾರೆ ಮತ್ತು ರೈತರಿಗೆ ಏಳು ಗಂಟೆ ನಿರಂತರವಾಗಿ ನೀಡಬೇಕು. ನಡುವೆ ವಿದ್ಯುತ್ ಮೂರು ನಾಲ್ಕು ಬಾರಿ ಕಡಿತ ಮಾಡುವದರಿಂದ ರೈತರಿಗೆ ತೊಂದರೆ ಯಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದು ವರೆದರೆ ಬರುವ ಸೋಮವಾರ ಇಂಡಿ ಬಂದ ಮಾಡಿ ಪ್ರತಿಭಟನೆ ಮಾಡಲಾಗುವದು ಎಂದರು.
ಶಿವಶAಕರ ಕಾಗಸೇರಿ, ಮಾಳಪ್ಪ ಪೂಜಾರಿ, ರಾಮಚಂದ್ರ ಬಡಿಗೇರ, ರಾಮನಗೌಡ ಪಾಟೀಲ ಮಾತನಾಡಿದರು.
ಪ್ರತಿಭಟನೆಯಲ್ಲಿ ಭೀಮಣ್ಣ ನಿಡೋಣ , ಸೋಮನಿಂಗ ಹೂಗಾರ, ಕಲ್ಲಪ್ಪ ಜನಗೊಂಡ, ಗುರುರಾಜ ಡೊಳ್ಳಿ, ಮಹಾಂತೇಶ ಬಡಿಗೇರ, ಮಾತುರಬಾ ಕಿಲಾರಿ, ಭುಯ್ಯಾರ ಗುಡ್ಲ, ಆನಂದ ಪತ್ತಾರ, ಮಾಳಪ್ಪ ಕಂಟಿಕಾರ, ಸಿದರಾಯ ಮಠ, ಅನೀಲ ಕೋಳಿ, ಮಲ್ಲಿಕಾರ್ಜುನ ವಾಲಿಕಾರ, ಶ್ರೀಶೈಲ ಪೂಜಾರಿ ಮತ್ತಿತರಿದ್ದರು.
ಮನವಿ ಸ್ವಿಕರಿಸಿ ಮಾತನಾಡಿದ ಎಇಇ ಎಸ್.ಆರ್. ಮೆಂಡೆಗಾರ ರೈತರು ಸಿಂಗಲ್ ಫೇಜ ವಿದ್ಯುತ್ ನೀಡಿದಾಗ ನೀರಾವರಿ ಪಂಪಶೆಟ್ಟು ಪ್ರಾರಂಭಿಸುತ್ತಾರೆ. ಇದರಿಂದ ಹೆಸ್ಕಾಂದವರಿಗೆ ಸಿಂಗಲ್ ಫೇಜ ವಿದ್ಯುತ್ ನೀಡಲು ತೊಂದರೆಯಾಗುತ್ತಿದೆ. ಗ್ರಾಮಸಭೆ ಕರೆದು ರೈತರಿಗೆ ಮಾಹಿತಿ ನೀಡಿ ಗ್ರಾಮಗಳಿಗೆ ಸಿಂಗಲ್ ಫೇಜ್ ನೀಡಲಾಗುವದು ಎಂದರು.
ಇಂಡಿ ಪಟ್ಟಣದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಮೆಂಡೆಗಾರ ಇವರಿಗೆ ಮನವಿ ಸಲ್ಲಿಸಿ ದರು.



















