ಮಹಿಳೆಯರು ಸ್ವಾವಲಂಬಿಯಾಗಬೇಕು: ಜಯಶ್ರೀ
ಇಂಡಿ : ಮಹಿಳೆಯರು ಯಾರ ಮೇಲೂ ಅವಲಂಬಿತರಾಗದೇ ಸ್ವಾವಲಂಬಿಗಳಾಗಬೇಕು. ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಶಿಕ್ಷಣದ ಜೊತೆಗೆ ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಂಡು ಕೌಶಲ್ಯಾಧಾರಿತ ಉದ್ಯೋಗಗಳನ್ನು ಪಡೆದು ಉನ್ನತ ಸ್ಥಾನಕ್ಕೆ ಬರಬೇಕೆಂದು ತಾಲೂಕು ಗ್ಯಾರಂಟಿ ಯೋಜನೆ ಮಹಿಳಾ ಘಟಕದ ಸದಸ್ಯೆ ಜಯಶ್ರೀ ಕಾಳೆ ಹೇಳಿದರು.
ಪಟ್ಟಣದ ಶಂಕರಲಿAಗ ದೇವಸ್ಥಾನದ ಹತ್ತಿರದ ಪರುಶುರಾಮ ಪೋಳ ಇವರ ಮನೆಯ ಮುಂದಿನ ಆವರಣದಲ್ಲಿ ಶ್ರೀ ಲಕ್ಷಿö್ಮÃ ಮಹಿಳಾ ಸ್ವ ಸಹಾಯ ಸಂಘದಿAದ ಸ್ವ ಉದ್ಯೋಗ ಕುರಿತು ನಡೆದ ಕಾರ್ಯಕ್ರಮ ಮತ್ತು ಅರಿಷಿಣ ಕುಂಕುಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಲಕ್ಷಿö್ಮÃ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ರೋಹಿಣ ಪೋಳ ಮಾತನಾಡಿ ನಮ್ಮ ಸಂಘದಿAದ ಮಹಿಳೆಯರಿಗೆ ಮನೆಯಲ್ಲಿಯೇ ಸಾಮಾನು ತಯಾರಿಸಿ ತರುವ ಸ್ವ ಉದ್ಯೋಗ ನೀಡುತ್ತೇವೆ. ಸಧ್ಯ ನಮ್ಮ ಸಂಘದಲ್ಲಿ ೮೦ ಮಹಿಳೆಯರು ಸ್ವ ಉದ್ಯೋಗದಲ್ಲಿ ತೊಡಗಿದ್ದು ಇದರಿಂದ ಮಹಿಳೆಯರು ಕುಟುಂಬಕ್ಕೂ ನೆರವಾಗುತ್ತಿದ್ದು ಸಂಘವೂ ಅರ್ಥಿಕವಾಗಿ ಬೆಳೆದಿದೆ ಎಂದರು.
ಮೋಹನ ಶಿಂಧೆ, ರಂಜನಾ ಕಟಕದೊಂಡ, ಆಸ್ಪಾಕ ಪಟೇಲ, ಪರಶುರಾಮ ಪೋಳ ಮಾತನಾಡಿದರು.
ಲಸಮಾರಂಭದಲ್ಲಿ ಸ್ವ ಉದ್ಯೋಗ ಮಾಡುವ ಮಹಿಳೆಯರು ಪಾಲ್ಗೊಂಡಿದ್ದರು.
ಇಂಡಿ ಪಟ್ಟಣದ ಶಂಕರಲಿಂಗ ದೇವಸ್ಥಾನದ ಹತ್ತಿರ ಶ್ರೀ ಲಕ್ಷಿö್ಮÃ ಮಹಿಳಾ ಸ್ವ ಸಹಾಯ ಸಂಘದಿAದ ನಡೆದ ಕಾರ್ಯಕ್ರಮದಲ್ಲಿ ಜಯಶ್ರೀ ಕಾಳೆ ಮಾತನಾಡಿದರು



















