ಇಂಡಿಯಲ್ಲಿ ಫೆ-1 ರಂದು ಕವಿ ಸಮಾವೇಶ..
ಇಂಡಿ: ಸಾಹಿತ್ಯಪ್ರೇಮಿಗಳು ಮತ್ತು ಉರ್ದು ಸಾಹಿತ್ಯಾಸಕ್ತರಿಗಾಗಿ ಇಂಡಿ ನಗರದಲ್ಲಿ ರಾಯಲ್ ಇಂಟರ್ ನ್ಯಾಶನಲ್ ಶಾಲೆಯ ವತಿಯಿಂದ ಆಲ್ ಇಂಡಿಯಾ ಅಝಿಮುಶ್ಶಾನ ಮುಶಾಯರಾ (ಕವಿ ಸಮಾವೇಶ) ಆಯೋಜಿಸಲಾಗಿದೆ. ಈ ಸಾಂಸ್ಕೃತಿಕ ಸಮಾರಂಭದಲ್ಲಿ ದೇಶದ ಪ್ರಖ್ಯಾತ ಮತ್ತು ಪ್ರಸಿದ್ಧ ಕವಿಗಳು ಭಾಗವಹಿಸುತಿದ್ದಾರೆ ಮತ್ತು ತಮ್ಮ ಸುಂದರ ಕಾವ್ಯಗಳ ಮೂಲಕ ಶ್ರೋತೃಗಣರನ್ನು ಮಂತ್ರಮುಗ್ಧಗೊಳಿಸುತ್ತಾರೆ.
ಈ ಮುಶಾಯರಾ ಉರ್ದು ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಒಂದು ಪ್ರಮುಖ ಹಂತವಾಗಿದ್ದು, ಸಾಹಿತ್ಯಾಸಕ್ತರಿಗಾಗಿ ಒಂದ ಸ್ವರ್ಣ ಅವಕಾಶವಾಗಿದೆ. ಈ ಸ್ಮರಣ Ãಯ ಸಮಾರಂಭದಲ್ಲಿ ಭಾಗವಹಿಸಿ, ಅದನ್ನು ಯಶಸ್ವಿ ಮಾಡಲು ವಿನಂತಿದ್ದಾರೆ. ಶನಿವಾರ, ೧ ಫೆ ಸಂಜೆ ೮ ಗಂಟೆಗೆ ರಾಯಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಆಯೋಜಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಸ್ಲಂ ಪಟೇಲ್: ೯೬೮೬೬೪೫೦೫೦, ಮೊಹಮ್ಮದ್ ರಫೀಕ್ ಗುಲ್ಬರ್ಗಾ: ೯೯೪೫೭೮೬೦೪೪ ಸಂಪರ್ಕಿಸಲು ಕೋರಿದ್ದಾರೆ.


















