ಇಹಲೋಕ ತ್ಯಜಿಸಿದ ದೈ.ಶಿ. ಇಲಾಖೆಯ ಜಿಲ್ಲಾಧಿಕಾರಿ ಲಾಳಸೇರಿ
ಇಂಡಿ : ವಿಜಯಪುರ ಜಿಲ್ಲಾ ದೈಹಿಕ ಶಿಕ್ಷಣ ಜಿಲ್ಲಾ ಅಧಿಕಾರಿ ಅಂಬಣ್ಣ ಎಸ್ ಲಾಳಸೇರಿ ಇಂದು ಸಾಯಂಕಾಲ ಲಚ್ಯಾಣ ಗ್ರಾಮದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ನಿವಾಸಿಯಾಗಿದ್ದು, ವಿಜಯಪುರ ಜಿಲ್ಲೆಯ ದೈಹಿಕ ಶಿಕ್ಷಣ ಇಲಾಖೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಮೋಟಾರು ಸೈಕಲ್ ಅಪಘಾತದಲ್ಲಿ ಗಂಭೀರ ಗಾಯವಾಗಿಗೊಂಡಿದ್ದರು. ಅದರಂತೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಉಪಚರಿಸಲಾಗುತ್ತಿತ್ತು. ಆದರೆ ಇತ್ತಿಚಿಗೆ ಸ್ವಗ್ರಾಮಕ್ಕೆ ಕರೆತಂದು ಮನೆಯಲ್ಲಿ ಉಪಚಾರ ನಡೆದಿತ್ತು. ಆದರೆ ಉಪಚಾರ ಫಲಿಸದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆಪ್ತರು ಮಾಹಿತಿ ನೀಡಿದ್ದು, ನಾಳೆ ಬೆಳಿಗ್ಗೆ 10 ಘಂಟೆಗೆ ಸ್ವ ಗ್ರಾಮ ಲಚ್ಯಾಣ ದಲ್ಲಿ ಅಂತ್ಯಕ್ರಿಯೆ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
ಸಹೋದರ, ಸಹೋದರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅದಲ್ಲದೆ ದೈಹಿಕ ಶಿಕ್ಷಕ ಬಂಧುಗಳು ತೀವ್ರ ನೋವು ವ್ಯಕ್ತಪಡಿಸಿದ್ದು, ಅವರ ಅಗಲಿಕೆ ದೈಹಿಕ ಶಿಕ್ಷಣ ಇಲಾಖೆಗೆ ತುಂಬಾಲಾರದ ನಷ್ಟವಾಗಿದೆ ಎಂದು ತಾಲ್ಲೂಕು ದೈ.ಶಿ.ಸಂಘದ ಅಧ್ಯಕ್ಷ ಪ್ರಕಾಶ ಐರೋಡಗಿ ತೀವ್ರ ಸಂತಾಪ ಸೂಚಿಸಿ ಹೇಳಿದರು.


















