ಸುಭಾಷ್ ಚಂದ್ರ ಬೋಸ್ ರವರ ಚಿಂತನೆ ಸಾರ್ವಕಾಲಿಕ : ಬಿ ಡಿ ಪಾಟೀಲ
ಇಂಡಿ : ಗುರುಬಸವ ಶಿಕ್ಷಣ ಸಂಸ್ಥೆಗಳ ಸಮೋಹಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸುಭಾಷ್ ಚಂದ್ರ ಬೋಸ್ ರವರ ಜಯಂತಿಯನ್ನು ಉದ್ಘಾಟನೆ ನೆರವೇರಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡುತ್ತಾ. ವಾರ್ಷಿಕ ಸ್ನೇಹ ಸಮ್ಮೇಳನಗಳು ಮಕ್ಕಳಿಗೆ ಭವಿಷ್ಯದ ದಿನಗಳಲ್ಲಿ ದೇಶಕ್ಕೆ,ನಾಡಿಗೆ, ಹಾಗೂ ಹೆತ್ತವರ ಬಾಳಿಗೆ ಬೆಳಕಾಗಬೇಕಾಗುವಂತೆ ಆಯೋಜನೆಗೆ ಮಾಡಬೇಕು ಎಂದು ಮಾತನಾಡಿದರು.ವಾರ್ಷೀಕ ಸ್ನೇಹ ಸಮ್ಮೇಳನ ಹಾಗೂ ಜನವರಿ 23 ಸುಭಾಷ್ ಚಂದ್ರ ಬೋಸ್ ರವರ ಜಯಂತಿ ಆಚರಣೆ ಮಾಡುವ ಮೂಲಕ ಮಕ್ಕಳಿಗೆ ದೇಶ ಪ್ರೇಮದ ವಿಚಾರಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವ ನಿರ್ಧಾರ ಗುರುಬಸವ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಮಾತನಾಡಿದರು.
ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷರಾದ ಎಮ್.ಜಿ. ಬಿರಾದರ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ, ಎಸ್ ಆರ್ ನಡಗಡ್ಡಿ,ಮಾಜಿ ತಾಲೂಕಾ ಪಂಚಾಯತ ಸದಸ್ಯರಾದ ಗಂಗಾಧರಗೌಡ ಬಿರಾದಾರ, ಗ್ರಾಂ ಪಂಚಾಯಿತ ಅಧ್ಯಕ್ಷರಾದ ರಮೇಶಗೌಡ, ಬಿರಾದಾರ, ಹಾಗೂ ಶಿಕ್ಷಕರು ಹಾಗೂ ಪೋಷಕರು ಸಾವಿರಾರೂ ಪಾಲಕರು ಉಪಸ್ಥಿತರಿದ್ದರು


















