ಇಂಡಿ| ಸಾರ್ವಜನಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ..! ಯಾವಾಗ ಗೊತ್ತಾ..?
ಇಂಡಿ : ಪಟ್ಟಣ್ಣದಲ್ಲಿ ಸಾರ್ವಜನಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಎಬಿವಿಪಿ ಕಾರ್ಯಕರ್ತರು, ಸ್ವಾಮಿ ವಿವೇಕಾನಂದರ ಅಭಿಮಾನಿಗಳು ಹಾಗೂ ತಾಲ್ಲೂಕಿನ ಜನರಲ್ಲಿ ಎಬಿವಿಪಿ ಪ್ರಾಂತ್ ಸದಸ್ಯ ಸಚೀನ ಧಾನಗೊಂಡ ಮನವಿ ಮಾಡಿಕೊಂಡಿದ್ದಾರೆ.
ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರ, ವಿಶ್ವ ವಿಜೇತ ಸ್ವಾಮಿ ವಿವೇಕಾನಂದರ 162 ನೇ ಜಯಂತಿ ಪ್ರಯುಕ್ತ ಸಾರ್ವಜನಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಭಾನುವಾರ, ಸಾಯಂಕಾಲ 6 ಗಂಟೆಗೆ ಸಿಂದಗಿ ರಸ್ತೆಯ ಸ್ವಾಮಿ ವಿವೇಕಾನಂದರ ವೃತ್ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನೂ ಮುಖ್ಯ ವಕ್ತಾರರಾಗಿ ಖ್ಯಾತ ವಾಗ್ಮಿ ಮಂಜುನಾಥ ಜುನಗೊಂಡ, ದಿವ್ಯ ಸಾನಿಧ್ಯ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಅಧ್ಯಕ್ಷತೆ ಅಡ್ವಕೇಟ್ ಸತೀಶಚಂದ್ರ ಕುಲಕರ್ಣಿ, ವಿಶೇಷ ಉಪಸ್ಥಿತಿ ರಾಜ್ಯ ಕಾರ್ಯದರ್ಶಿ ಎಬಿವಿಪಿ ಸಚೀನ ಕುಳಗೇರಿ, ಭೀಮಣ್ಣಗೌಡ ಬಗಲಿ ನಗರ ಅಧ್ಯಕ್ಷರು ಉಪಸ್ಥಿತರಿವರು ಎಂದು ತಿಳಿಸಿದರು.


















