ತಾಲೂಕು ಅಧ್ಯಕ್ಷರಾಗಿ ಗುಂಡಪ್ಪ ಕೊಳ್ಳುರೆ ನೇಮಕ
ಕಮಲಾಪುರ : ಕರ್ನಾಟಕ ರಾಜ್ಯ ಅಂಗವಿಕಲ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಗುಂಡಪ್ಪ ಕೊಳ್ಳುರೆ ಅವರನ್ನು ನೇಮಕ ಮಾಡಲಾಗಿದೆ .
ಕೂಡಲೇ ಕಾರ್ಯ ಪ್ರವರ್ತರಾಗಿ ಅಂಗವಿಕಲರ ನೌಕರರ ಸಮಸ್ಯೆಗೆ ಸ್ಪಂದಿಸುವ ಕಾರ್ಯದಲ್ಲಿ ತೊಡಗುವಂತೆ ಸಂಘದ ಜಿಲ್ಲಾ ಅಧ್ಯಕ್ಷ ಸಂತೋಷ್ ಧಾಯಗೊಂಡ ಆದೇಶ ಹೊರಡಿಸಿದ್ದಾರೆ.
ಗುಂಡಪ್ಪ ಅವರು ಮೂಲತಃ ಲೇಂಗಟ ಗ್ರಾಮದವರಾಗಿದ್ದು ಪ್ರಸ್ತುತವಾಗಿ ವಿಕೆ ಸಲಗರ್ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ


















