ವಿಪ್ರ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ವಿಜಯಪುರ: ವಿಪ್ರ ಪ್ರಿಮಿಯರ ಲೀಗ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ನಗರದ ಉತ್ತರಾಧಿ ಮಠದ ಆವರಣದಲ್ಲಿ ಚಾಲನೆ ದೊರಕಿತು.
ಅಖೀಲ ಭಾರತೀಯ ಬ್ರಾಹ್ಮಣ ಮಹಾಸಂಘ ರಾಷ್ಟೀಯ ಪ್ರಧಾನಕಾರ್ಯದರ್ಶಿ ಗಿರೀಶ್ ನೀಲಗುಂದ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ ಬ್ರಾಹ್ಮಣ ಸಮುದಾಯದ
ಒಗ್ಗಟ್ಟು ಮತ್ತು ಏಕತೆ ಬೆಳಿಸಲು ವಿಪ್ರ ಪ್ರೀಮಿಯರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಮುಂಬರುವ ದಿನಗಳಲ್ಲಿ ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ವತಿಯಿಂದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲು ಚಿಂತನೆ ಮಾಡಲಾಗಿದೆ. ಆದ್ದರಿಂದ ಬ್ರಾಹ್ಮಣ ಸಮುದಾಯದ ಯುವಕರ ತಂಡಗಳನ್ನು ರಚಿಸಲು ಕರೆ ನೀಡಿದರು.
ಪ್ರಸನ್ನಾಚಾರ್ಯ ಮನಗೂಳಿ, ಪ್ರಭಂಜನ ಮನಗೂಳಿ, ಕೃಪಾಚಾರ್ಯ ಗಲಗಲಿ, ಶ್ರೀಧರ, ಸುದನ್ವಾ ಸಂಗಮ, ಪ್ರಸಾದ ಜೋಶಿ, ರೋಹನ ಆಪ್ಟೆ, ರಾಹುಲ ಆಪ್ಟೆ, ಪವನ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.


















