ಸಂಗನಗೌಡ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ..!
ಇಂಡಿ : ನಾದ ಕೆಡಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂಗನಗೌಡ ಎಸ್ ಹಚಡದ ಅವರನ್ನು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ರಿ) ಬೆಂಗಳೂರು ಶಾಖೆಯ ವಿಜಯಪುರ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ವಿಜಯಪುರ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ ಎಂ ಪಾಟೀಲ ನಿವ್ರತ್ತಿಯಾದ ಪ್ರಯುಕ್ತ ನೂತನ ಜಿಲ್ಲಾ ಅಧ್ಯಕ್ಷರನ್ನು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಆಯ್ಕೆಮಾಡಲಾಗಿದೆ ಎಂದು ಜಿಲ್ಲಾ ಗೌರವಧ್ಯಕ್ಷರಾದ ಎಚ್ ಎಂ ಬಿಳವಾರ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಸಭೆಯಲ್ಲಿ ರಾಜ್ಯವಿಭಾಗಿಯ ಕಾರ್ಯದರ್ಶಿ ಶಂಕರ ಚವ್ಹಾಣ ಕ್ರೀಡಾ ಕಾರ್ಯದರ್ಶಿ ಡಾ. ಸಲೀಮ ಮಕಂದಾರ ರಾಜ್ಯ ಜಂಟಿ ಕಾರ್ಯದರ್ಶಿ ಬಿ ಎನ್ ಹಿರೇಮಠ, ಶೇಖರ್ ನಾಯಕ, ಇಂಡಿ ತಾಲ್ಲೂಕು ಪ್ರಾ.ದೈ.ಶಿ ಅಧ್ಯಕ್ಷ ಪ್ರಕಾಶ್ ಐರೋಡಗಿ, ರಾಜು ಕನಕರೆಡ್ಡಿ, ತುಕಾರಾಮ ಹೊಸಮನಿ, ಜಗದೀಶ್ ದೇವರಡ್ಡಿ, ಶ್ರೀಧರ್ ಜೋಶಿ, ಸಗರ ಕಿಟ್ಟು ಗಾಡಿವಡ್ಡರ, ಎಂ ಎಂ ಕೆಂಭಾವಿ, ಮಂಜು ನಾಯ್ಕೋಡಿ ತೇಗ್ಗಿ ಮತ್ತಿತ್ತರು ಇದ್ದರು.


















