ವಿದ್ಯಾರ್ಥಿನಿ ಸೌಭಾಗ್ಯ ಮತ್ತು ಲಕ್ಮ್ಮೀ ರಾಜ್ಯ ಮಟ್ಟಕ್ಕೆ ಆಯ್ಕೆ
ರಾಯಚೂರು: ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಸರಕಾರಿ ಪ್ರೌಢ ಶಾಲೆ ಹಿರಾಪೂರು ಇಬ್ಬರು ವಿದ್ಯಾರ್ಥಿಗಳು ಕುಮಾರಿ ಸೌಭಾಗ್ಯ ಮತ್ತು ಕುಮಾರಿ ಲಕ್ಷ್ಮಿ ಇವರು ಮತದಾರರ ದಿನಾಚರಣೆಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಇವರಿಗೆ ಎಲ್ಲಾ ಶಿಕ್ಷಕ ವೃಂದದವರಿಂದ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಈ ಸಂದರ್ಭದಲ್ಲಿ ಪ್ರೌಢಶಾಲೆ ವಿಭಾಗದ ಪ್ರಭಾರಿ ಮುಖ್ಯ ಗುರುಗಳಾದ ಕೆಂಡಗಣಪ್ಪ ಮತ್ತು ಅತಿಥಿ ಶಿಕ್ಷಕರಾದ ಕು. ಶಂಕರ್ ಗೌಡ ಪೋ. ಪಾ ಶ್ರೀ ನರಸಿಂಹ ಕು. ಸಂದ್ಯಾ, ಕು.ನಿಶಾ ಶ್ರೀಮತಿ ನರಸಮ್ಮ ಮತ್ತು ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹರ್ಷವನ್ನು ವ್ಯಕ್ತಪಡಿಸಿದರು.


















