ವಿಜಯಪುರ | ಏಡ್ಸ್ ಜಾಗೃತಿ ಕುರಿತು ಕ್ಯಾಂಡಲ್ ಮಾರ್ಚ
ವಿಜಯಪುರ, ಡಿಸೆಂಬರ್ 1 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಭಂದಕ ಹಾಗೂ ನಿಯಂತ್ರಣ ಘಟಕದ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಏಡ್ಸ್ ಜನ ಜಾಗೃತಿ ಆಂದೋಲನ ಅಂಗವಾಗಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತದವರೆಗೆ (ಕ್ಯಾಂಡಲ್ ಮಾರ್ಚ್), ದೀಪ ನಡಿಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬೀದಿನಾಟಕ ತಂಡದಿಂದ ಕೋಲಾಟ ಹಾಗೂ ಏಡ್ಸ್ ಜಾಗೃತಿ ಕುರಿತ ಹಾಡುಗಳನ್ನು ಹಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ಟಿಹೋಳಿ , ಜಿಲ್ಲಾ ಕ್ಷಯರೋಗ ಕಲ್ಯಾಣಾಧಿಕಾರಿ ಮಲ್ಲಗೌಡ ಬಿರಾದರ್, ಹಿರಿಯ ಆಪ್ತ ಸಮಾಲೋಚಕರು ರವಿ ಕಿತ್ತೂರ, ಪೀಟರ್ ಅಲೆಗ್ಸಾಂಡರ್, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಿಬ್ಬಂದಿ ಭಾಗವಹಿಸಿದ್ದರು.


















