ಅವರು ಗುರುವಾರ ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಮಾಜದ ಪೂಜ್ಯ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ದಶಕಗಳಿಂದ ಹಲವು ಹೋರಾಟ ನಡೆಸಿದರು ಸಹ ಯಾವ ಸರಕಾರವು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದ ಹಿನ್ನೆಲೆಯಲ್ಲಿ ಪೂಜ್ಯ ಶ್ರೀಗಳ ಕಳಕಳಿಯ ಮೇರೆಗೆ ಕಾನೂನು ಹೋರಾಟ ಮಾಡಲು ಎಲ್ಲ ವಕೀಲರು ಸಂಘಟಿತರಾಗಿದ್ದು ಸಪ್ಟೆಂಬರ್ 22ರಂದು ಬೆಳಗಾವಿಯಲ್ಲಿ ಕಾನೂನು ಹೋರಾಟದ ಕುರಿತು ದೀರ್ಘ ಸಮಾವೇಶ ನಡೆಯಲಿದೆ.
ಪೂಜ್ಯರ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶಕ್ಕೆ ಎಲ್ಲ ಜಿಲ್ಲೆಗಳ ಪಂಚಮಸಾಲಿ ಸಮಾಜದ ವಕೀಲರು, ಬೆಂಬಲ ಸೂಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತಿದ್ದು ಇಂಡಿ ತಾಲೂಕಿನ ವಕೀಲರು ಸಹ ಈ ಸಮಾವೇಶದಲ್ಲಿ ಪಾಲ್ಗೊಂಡು ಸಮಾಜದ ಬಡ ಮಕ್ಕಳಿಗೆ ಮೀಸಲಾತಿ ಕೊಡಿಸುವ ಹೋರಾಟ ನಡೆಸಲಿದ್ದೇವೆ ಎಂದರು.
ಹಿರಿಯ ನ್ಯಾಯವಾದಿಗಳಾದ ಎಸ್.ಬಿ. ಬೂದಿಹಾಳ, ಬಿ.ಬಿ. ಕೊಟ್ಟಲಗಿ, ಎ.ಎಂ. ಬಿರಾದಾರ, ಎ.ಪಿ. ಬಿರಾದಾರ, ಜಿ.ಎಸ್. ಪಾಟೀಲ, ವೀರೇಂದ್ರ ಪಾಟೀಲ, ಡಿ.ಜಿ. ಜೋತಗೊಂಡ, ಪಿ.ಡಿ. ಲವಗಿ, ಆರ್.ಜೆ. ಪಾಟೀಲ, ಎಸ್.ಆರ್. ಮುಜಗೊಂಡ, ಎಂ.ಸಿ. ಬಿರಾದಾರ, ಎಂ.ಬಿ. ಬಿರಾದಾರ, ಎಸ್. ಎಸ್. ಬಿರಾದಾರ, ಎ.ಬಿ.ಆಳೂರ, ಎಸ್.ಆರ್. ಬಿರಾದಾರ, ಎಸ್.ಎ. ಚಾಂದಕವಟೆ, ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ, ಪಂಚಮಸಾಲಿ ಮುಖಂಡ ಬಿ.ಬಿ. ಬಿರಾದಾರ ಜೇವೂರ ಮಾತನಾಡಿದರು.