ಭೀಮಾನದಿ ತೀರದ ಜನರು ಎಚ್ಚರಿಕೆ ವಹಿಸಿ..! ಗುಬ್ಬೇವಾಡ ಗ್ರಾಮದಲ್ಲಿ ಡಂಗೂರು..
ಇಂಡಿ : ಮಹಾರಾಷ್ಟ್ರದಿಂದ ಭೀಮಾ ನದಿಗೆ ಬರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಗುಬ್ಬೇವಾಡ ಗ್ರಾಮದ ನದಿ ಪಾತ್ರದ ಜನರು ಜಾಗರೂಕರಾಗಿ ಇರಬೇಕು ಎಂದು ಗುಬ್ಬೇವಾಡ ಗ್ರಾಮದಲ್ಲಿ ಡಂಗೂರು ಸಾರಿದ್ದಾರೆ.
ಇಂಡಿ ತಾಲೂಕಿನ ಗುಬ್ಬೆವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುಬ್ಬೆವಾಡ, ಶಿರಗೂರ ಇನಾಂ, ಚಿಕ್ಕಮಣೂರ ಗ್ರಾಮದಲ್ಲಿ ಡಂಗೂರು ಸಾರಲಾಗಿದೆ. ಭೀಮಾ ನದಿಗೆ ಉಜನಿ ಜಲಾಶಯದಿಂದ ಅತೀ ಹೆಚ್ಚಿನ ನೀರು ಹರಿಬಿಡಲಾಗುವುದರಿಂದ ನದಿಪಾತ್ರದ ಗ್ರಾಮಸ್ಥರು ಎಚ್ಚರದಿಂದ ಮತ್ತು ಜಾಗೃತಿಯಿಂದ ಇರಬೇಕು ಎಂದು ಡಂಗೂರು ಸಾರಿದ್ದು, ಪತ್ರಿಕಾ ಪ್ರಕಟಣೆ ಮೂಲಕವೂ ತಿಳಿಸಿದ್ದಾರೆ.