ಅಥರ್ಗಾ ಗ್ರಾಮ ಆಡಳಿತಾಧಿಕಾರಿ ವಿರುದ್ಧ ಜಾತಿ ನಿಂದನೆ ದೂರು..! ಏನು ಗೊತ್ತಾ..?
ಇಂಡಿ : ಗ್ರಾಮ ಆಡಳಿತ ಅಧಿಕಾರಿ ವಿರುದ್ಧ ಜಾತಿ ನಿಂದನೆ ಹಾಗೂ ಅವಾಚ್ಯ ಶಬ್ದಗಳ ಬಳಕೆ ಹಿನ್ನೆಲೆ ಶಿಸ್ತು ಕ್ರಮಕ್ಕಾಗಿ ಶಿರಸ್ತೆದಾರ ಎಸ್ ಆರ್ ಮುಜಗೊಂಡ ಅವರಿಗೆ ಲಂಬಾಣಿ ಸಮಾಜದ ಯುವಕರು ಮನವಿ ಸಲ್ಲಿಸಿದರು.
ಶುಕ್ರವಾರ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ಲಂಬಾಣಿ ಸಮಾಜದ ಯುವಕರು, ಅಥರ್ಗಾ ಗ್ರಾಮದ ಆಡಳಿತ ಅಧಿಕಾರಿ ಯುವರಾಜ ನಿಂಬರಗಿ ಎಂಬುವರು ಲಮಾಣಿ ಸಮಾಜಕ್ಕೆ ಅವಾಚ್ಯ, ಅಸಲಿಲ ಪದಗಳಿಂದ ಜಾತಿ ನಿಂದನೆ ಮಾಡಿದ್ದು ಅತ್ಯಂತ ನೋವಾಗಿದೆ. ಆ ಗ್ರಾಮ ಆಡಳಿತ ಅಧಿಕಾರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರಗಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಣಪತಿ ರಾಠೋಡ, ವಿಜಯಕುಮಾರ್ ರಾಠೋಡ, ಅಶೋಕ ಜಾಧವ, ಅವಿನಾಶ್ ರಾಠೋಡ, ವಿಶ್ವನಾಥ ರಾಠೋಡ, ಲಾಲು ಚವ್ಹಾಣ ಹಾಗೂ ಇನ್ನೂ ಅನೇಕ ಯುವಕರು ಉಪಸ್ಥಿತರಿದ್ದರು.


















