ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕ್ರಿಸ್ತ ರಾಜ ಶಾಲೆ ಮೇಲುಗೈ
ಹನೂರು: ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಕ್ರಿಸ್ತರಾಜ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಪಾಲು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದೆ.
ಬಾಲಕಿಯರ ವಿಭಾಗದ ಮೇಲಾಟಗಳಲ್ಲಿ, 100 ಮೀಟರ್ ಓಟ ಚೈತ್ರ ಪ್ರಥಮ, ಹಾಗೂ ಅನ್ಸಿಕ ದ್ವಿತೀಯ ಸ್ಥಾನ, 200 ಮೀಟರ್ ಓಟ ಉಮ್ಮೇಜಾ ಪ್ರಥಮ, 400 ಮೀಟರ್ ಓಟ ಪ್ರಥಮ ಹರ್ಷಿಣಿ, ಉದ್ದ ಜಿಗಿತ ಅನ್ಸಿಕ ತೃತೀಯ, ಬಾಲಕಿಯರ 4*100ಮೀಟರ್ ರಿಲೇ ಆಂಗ್ಲ ಮಾಧ್ಯಮ ಅನ್ಸಿಕ ತಂಡ ಪ್ರಥಮ 4*100 ಮೀಟರ್ ರಿಲೇ ಕನ್ನಡ ಮಾಧ್ಯಮ ದ್ವಿತೀಯ.
ಬಾಲಕಿಯರ ವಾಲಿಬಾಲ್ ದ್ವಿತೀಯ, ಬಾಲಕರ ಮೇಲಾಟಗಳಲ್ಲಿ, 200 ಮೀಟರ್ ಓಟ ವಿಹಾನ್ ದ್ವಿತೀಯ, 400 ಮೀಟರ್ ಓಟ ಜಸ್ವಂತ್ ಪ್ರಥಮ, ಪಂದ್ಯಾಟಗಳು ಥ್ರೋಬಾಲ್ ಪ್ರಥಮ, ವಾಲಿಬಾಲ್ ಪ್ರಥಮ, ಖೋ ಖೊ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ವ್ಯವಸ್ಥಾಪಕರಾದ ಫಾದರ್ ರೋಷನ್, ಮುಖ್ಯ ಶಿಕ್ಷಕಿ ಸಿಸ್ಟರ್ ಗೀತಾ ರುಫೀನಾ, ದೈಹಿಕ ಶಿಕ್ಷಣ ಶಿಕ್ಷಕ ರಾಯಪ್ಪ, ಶಿಕ್ಷಕರಾದ ವಿಕ್ಕಿ, ಪ್ರಭು, ಲತಾ ಪುಷ್ಪ, ಸೆಲ್ವ ಹಾಗೂ ಮಹದೇವ್ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.


















