ಕುಡಿಯುವ ನೀರಿನ ಸಮಸ್ಯೆ ಉಲ್ಭಣ, ಇಂಡಿ ತಾ.ಪಂ ಕಛೇರಿ ವಿರುದ್ಧ ಪ್ರತಿಭಟನೆ..!
ಇಂಡಿ: ತಾಲೂಕಿನ ಸಂಗೋಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಗ್ಗೆಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದ್ದು ಗುರುವಾರ ತೆಗ್ಗೆಳ್ಳಿ ಗ್ರಾಮದ ಮಹಿಳೆಯರು ತಾಲೂಕಾ ಪಂಚಾಯತ್ ಕಾರ್ಯಾಲಯದ ಮುಂದೆ ಎರಡು ಘಂಟೆಗಳವರೆಗೆ ಧರಣ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಬಹಳ ವರ್ಷಗಳಿಂದಲೇ ಇದೆ. ಗ್ರಾ. ಪಂ ವತಿಯಿಂದ ಇದುವರೆಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ ಕಳೆದ ೧೫ ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾದ್ಯಮಗಳ ಮುಂದೆ ಅಳಲು ತೋಡಿಕೊಂಡರು.
ನಮ್ಮ ಗ್ರಾಮಕ್ಕೆ ನೀರಿನ ಸಮಸ್ಯೆ ಇರುವ ಬಗ್ಗೆ ಎಲ್ಲ ರಾಜಕಾರಣ ಗಳಿಗೂ ಹೇಳಿದ್ದೇವೆ ಆದರೆ ಯಾರೂ ನಮ್ಮೂರಿನ ನೀರಿನ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಇಂದು ನಾವೇ ಇಂಡಿ ನಗರಕ್ಕ ಆಗಮಿಸಿದ್ದೇವೆ. ಎಸಿ ಅವರಿಗೆ ಭಧೇಟಿಯಾದಾಗ ತಾಲೂಕಾ ಪಂಚಾಯತ್ ಇಓ ಅವರಿಗೆ ಭೇಟಿ ಮಾಡಿ ಎಂದು ತಿಳಿಸಿದ್ದು ತಾಲೂಕಾ ಪಂಚಾಯತ ಇಓ ಅವರು ಕಾರ್ಯಾಲಯದಲ್ಲಿ ಇಲ್ಲ. ಹೀಗಾಗಿ ನಾವು ಧರಣ ಮಾಡುತ್ತಿದ್ದೇವೆ. ನಮಗೆ ನೀರು ಪೂರೈಸದಿದ್ದರೆ ನಾಳೆ ಆಲಮೇಲ- ಇಂಡಿ ರಸ್ತೆ ಮೇಲೆ ಧರಣ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ನಿಂಬೆವ್ವ ಬೀರನಹಳ್ಳಿ, ಯಲ್ಲವ್ವ ತಾಂಬೆ, ಅವ್ವಮ್ಮ ಕೋರೆ, ರಾಜಕ್ಕ ಕೋರೆ, ಕಸ್ತೂರಿ ಬೀರನಳ್ಳಿ, ರುಕ್ಮವ್ವ ಕೋರೆ, ತಿಪ್ಪವ್ವ ಕೋರೆ, ಶಾಂತವ್ವ ಶಿರಶ್ಯಾಡ, ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ತೆಗ್ಗೆಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದ್ದು ಗುರುವಾರ ತೆಗ್ಗೆಳ್ಳಿ ಗ್ರಾಮದ ಮಹಿಳೆಯರು ತಾಲೂಕಾ ಪಂಚಾಯತ್ ಕಾರ್ಯಾಲಯದ ಮುಂದೆ ಎರಡು ಘಂಟೆಗಳವರೆಗೆ ಧರಣ ನಡೆಸಿದರು.



















