ಇಂಡಿಯಲ್ಲಿ ಪಿಎಸ್ಐ ವಿರುದ್ಧ ಪ್ರತಿಭಟನೆ.. ಕಾರಣ ಗೊತ್ತಾ..?
ಇಂಡಿ : ಸಾರ್ವಜನಿಕರ ವಿವಿಧ ಸಮಸ್ಯೆಗಳು, ಕಳ್ಳರಿಗೆ ಕಡಿವಾಣ ಹಾಕಬೇಕಿದೆ ಪಿಎಸ್ಐ ವಿರುದ್ಧ ರೈತರು ಪ್ರತಿಭಟನೆ ನಡೆಸಿರುವ ಘಟನೆ ಭೀಮೆಯಲ್ಲಿ ನಡೆದಿದೆ. ಹೌದು..! ಹೊರ್ತಿ ಠಾಣಾ ಪಿ ಎಸ್ ಐ ಅವರನ್ನು ಅಮಾನತ್ತಿಗೆ ಆಗ್ರಹಿಸಿ ರೈತ ಮುಖಂಡ ಅಣ್ಣಪ್ಪ ಖೈನೂರ ಅವರ ನೇತೃತ್ವದಲ್ಲಿ ನೂರಾರು ಜನರು ಸೇರಿ ಪೋಲೀಸ್ ಠಾಣೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ಹೊರ್ತಿ ಗ್ರಾಮದಲ್ಲಿರುವ ಪೋಲಿಸ್ ಠಾಣಾ ಪಿಎಸ್ಐ ಹಣದದಾಹದಿಂದ ಅಕ್ರಮ ಚಟುವಟಿಕೆಗಳೆ ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿ ರೈತ ಮುಖಂಡ ಅಣ್ಣಪ್ಪ ಖೈನೂರ ಆರೋಪಿಸಿದರು. ಪ್ರತಿ ಹಳ್ಳಿ, ಗ್ರಾಮದಲ್ಲಿ ಗುಂಡಾಗಳಿಗೆ ಸಹಾಯ ಮಾಡುವುದು, ಕಿರಾಣಿ ಹಾಗೂ ಪಾನಶಾಪ್ ಗಳಲ್ಲಿ ಮದ್ಯ ಮಾರುವುದು , ಒಸಿ, ಮಟಕಾ ಇಸ್ಪೆಟ್ ಅಡ್ಡೆಗಳಂತಹ ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡಿ ದುಷ್ಟರ ಜೊತೆಯಲ್ಲಿ ಕೈ ಗೂಡಿಸುವ ಕೆಟ್ಟ ಕೆಲಸ ಮಾಡುತ್ತಿದ್ದಾರೆ ಎಂದರು. ಅದರಂತೆ ಚಡಚಣ ಗ್ರಾಮದಂತೆ, ಹೊರ್ತಿ ಗ್ರಾಮದಲ್ಲಿಯೂ ಕೆಟ್ಟ ವಾತಾವರಣ ಸೃಷ್ಟಿಸುವ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಅದಲ್ಲದೇ ನಿಂಗಪ್ಪ ಸಿದರಾಯ ದೇಗಿನಾಳ ಮುಗ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಲಾಗಿದೆ. ವ್ಯಕ್ತಿಗೆ ರಕ್ಷಣೆ ನೀಡುವ ಹಾಗೂ ಕೆಟ್ಟ ಕೆಲಸದಲ್ಲಿ ಪಿಎಸ್ಐ ಪಾಲ್ಗೊಳ್ಳುತ್ತಿದ್ದಾರೆ. ಆ ನಿಂಗಪ್ಪ ದೇಗಿನಾಳ ಮೇಲೆ ಗುಂಡಾಕಾಯ್ದೆ ಬಂಧಿಸಿ ರೌಡಿ ಶೀಟರ್ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ರಮಾಕಾಂತ ಬಿರಾದಾರ,ಎಸ್ ಎಸ್ ಶೀವೂರ,ಗಂಗಾರಾಮ ಸಿದ್ದಪ್ಪ ಭೊಸಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


















