• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ನಂದಿ ಸಕ್ಕರೆ ಕಾರ್ಖಾನೆ ಉಳಿಸಲು ಕೈ ಮುಗಿದು ಸಚಿವ ಎಮ್ ಬಿ ಪಾಟೀಲರಿಗೆ ಮನವಿ ಸಲ್ಲಿಸಿದ ಕಾರ್ಮಿಕರು..!

      Voice of janata

      July 14, 2024
      0
      ನಂದಿ ಸಕ್ಕರೆ ಕಾರ್ಖಾನೆ ಉಳಿಸಲು ಕೈ ಮುಗಿದು ಸಚಿವ ಎಮ್ ಬಿ ಪಾಟೀಲರಿಗೆ ಮನವಿ ಸಲ್ಲಿಸಿದ ಕಾರ್ಮಿಕರು..!
      0
      SHARES
      225
      VIEWS
      Share on FacebookShare on TwitterShare on whatsappShare on telegramShare on Mail

      ನಂದಿ ಸಕ್ಕರೆ ಕಾರ್ಖಾನೆ ಉಳಿಸಲು ಕೈ ಮುಗಿದ ಸಚಿವ ಎಮ್ ಬಿ ಪಿ ಗೆ ಮನವಿ ಸಲ್ಲಿಸಿದ ಕಾರ್ಮಿಕರು..!

      ವಿಜಯಪುರ, ಜು. 14: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿ ಈ ವರ್ಷದ ಹಂಗಾಮಿನಲ್ಲಿ ಕಬ್ಬು ನುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಭರವಸೆ ನೀಡಿದ್ದಾರೆ.

      ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಕಾರ್ಖಾನೆಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಉಪಸ್ಥಿತರಿದ್ದ ಇಲ್ಲಿನ ಕಾರ್ಮಿಕರು ಕಾರ್ಖಾನೆ ಉಳಿಸಿ ಎಂದು ಕೈಮುಗಿದು ಬೇಡಿಕೊಂಡ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಅಲ್ಲಿದ್ದವರ ಕರುಳು ಚುರ್ ಎನಿಸಿ ಕಣ್ಣುಗಳು ತೇವಗೊಳ್ಳುವಂತೆ ಮಾಡಿದವು. ಅಷ್ಟೇ ಅಲ್ಲ, ಈ ಪ್ರಸಂಗ ಕಾರ್ಖಾನೆಯ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು.

      ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದ ರೈತರು, ಕಾರ್ಖಾನೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ರೈತ ಮುಖಂಡರು ಮತ್ತು ಎಂಜಿನಿಯರಿಂಗ್ ಕಂಪನಿ ಅಧಿಕಾರಿಗಳಿಂದ ಪ್ರತ್ಯೇಕವಾಗಿ ಸಭೆ ನಡೆಸಿ ಮಾಹಿತಿ ಪಡೆದ ಸಚಿವರು, ಕಾರ್ಖಾನೆ ಪುನಾರಂಭದ ಹಲವಾರು ಮಾರ್ಗೋಪಾಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

      ಈ ವೇಳೆ ಮಾತನಾಡಿದ ನಾನಾ ಮುಖಂಡರು, ಸಹಕಾರಿ ತತ್ವದಲ್ಲಿ ಪ್ರಾರಂಭವಾದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಗಲಗಲಿ ಭಾಗದ ರೈತರ ಜೀವನಾಡಿಯಾಗಿದೆ. ಕಳೆದ 30 ವರ್ಷಗಳಿಂದ ನಮ್ಮೆಲ್ಲರ ಅಸ್ಮಿತೆಯಾಗಿದ್ದು, ಕೇವಲ ಜೋಳ, ಕಾಳು, ಕಡಿ, ಒಣ ಬೇಸಾಯಕ್ಕೆ ಸೀಮಿತರಾಗಿದ್ದ ಇಲ್ಲಿನ ರೈತರು ಕಾರ್ಖಾನೆ ಪ್ರಾರಂಭವಾದಾಗಿನಿಂದ ಕಬ್ಬು ಬೆಳೆಯುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಸುಧಾರಿಸುವಂತೆ ಮಾಡಿದೆ. ಆದರೆ, ಇತ್ತೀಚಿಗೆ ಪೈಪೋಟಿ, ಆಡಳಿತ ಮಂಡಳಿಯಲ್ಲಿ ವೃತ್ತಿಪರತೆ ಕೊರತೆ ಹಾಗೂ ಕೆಲವು ನ್ಯೂನ್ಯತೆಗಳಿಂದಾಗಿ ಕಾರ್ಖಾನೆ ಸಂಕಷ್ಟದ ಸುಳಿಗೆ ಸಿಲುಕಿದೆ. 2017 ಯೋಜನೆ ಐಜಾಕ್ ಪುಣೆ ಕಂಪನಿಗೆ ಬಾಯ್ಲರ್ ಪ್ಯಾಕೇಜ್ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಆದರೆ, ನಂತರ ಈ ಕಾಮಗಾರಿಯನ್ನು ಪುಣೆಯ ಎಸ್.ಎಸ್. ಎಂಜಿನಿಯರಿಂಗ್ ಕಂಪನಿಗೆ ನೀಡಿದ ನಂತರ 04.03.2023 ಬಾಯ್ಲರ್ ಇಎಸ್ಪಿ ಸ್ಪೋಟವಾಗಿ ಮೂರು ಜನ ಸಾವಿಗೀಡಾಗಿದ್ದಾರೆ. ಬಳಿಕ ಅದೇ ಕಂಪನಿ ಬಳಿಕ 04.07.2024 ಬಾಯಲರ್ ಪ್ರಥಮ ಇಎಸ್ಪಿ ಪ್ರಾಯೋಗಿಕವಾಗಿ ಪ್ರಾರಂಭ ಮಾಡಿತ್ತು. ಆದರೆ, 07.07.2024 ಇಎಸ್ಪಿ ಕುಸಿತವಾಗಿದೆ. ಇದರಿಂದಾಗಿ ರೈತರು ಮತ್ತು ಕಾರ್ಮಿಕರು ಕಾರ್ಖಾನೆಯ ಪುನಾರಂಭದ ಕುರಿತು ಭರವಸೆ ಕಳೆದುಕೊಂಡಿದ್ದಾರೆ. ಕಾರ್ಖಾನೆಯ ಸಾಮರ್ಥ್ಯ ವಿಸ್ತರಣ ಘಟಕ ನಿಗಧಿತ ಅವಧಿಯಲ್ಲಿ ಕಾರ್ಯ ಆರಂಭಿಸದ ಕಾರಣ ಬಹುದೊಡ್ಡ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.

      ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಾರ್ಖಾನೆ ಪುನಾರಂಭಿಸುವ ಕುರಿತು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಈ ವಾರ ಎಸ್.ಎಸ್. ಎಂಜಿನಿಯರ್ಸ್ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಯಿಸಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಈಗಾಗಲೇ ಸಚಿವರಾದ ಎಚ್. ಕೆ. ಪಾಟೀಲ, ಆರ್. ಬಿ. ತಿಮ್ಮಾಪುರ, ಶಾಸಕ ಜೆ. ಟಿ. ಪಾಟೀಲ, ಮಾಜಿ ಸಚಿವ ಅಜಯಕುಮಾರ ಸರನಾಯಕ ಮತ್ತಿತರ ಮುಖಂಡರೊಂದಿಗೆ ಸಿಎಂ ಭೇಟಿಯಾಗಿದ್ದು, ಕಾರ್ಖಾನೆಗೆ ನೆರವಾಗಲು ಮೃದುಸಾಲ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಕಾರ್ಖಾನೆ ಪದಾಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ಧೈರ್ಯ ತುಂಬಿದರು.

      ಅಲ್ಲದೇ, ಈ ಸಭೆಯಲ್ಲಿಯೇ ಪುಣೆಯ ಎಸ್. ಎಸ್. ಎಂಜಿನಿಯರ್ಸ್ ಕಂಪನಿಯ ಮಾಲಿಕ ಎಸ್. ಬಿ. ಬರ್ಡ್ ಅವರ ಜೊತೆ ಮೊಬೈಲಿನಲ್ಲಿ ಮಾತನಾಡಿದ ಸಚಿವರು, ಮುಂಬರುವ ಹಂಗಾಮಿನಲ್ಲಿ ಕಬ್ಬು ನುರಿಸಲು ಅನುಕೂಲ ಮಾಡಿಕೊಡಲು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.

      ಈ ಸಂದರ್ಭದಲ್ಲಿ ಬೀಳಗಿ ಶಾಸಕ ಜೆ. ಟಿ. ಪಾಟೀಲ, ಕಾರ್ಖಾನೆ ಉಪಾಧ್ಯಕ್ಷ ಎ. ಪಿ. ಲೆಂಕೆಣ್ಣವರ, ನಿರ್ದೇಶಕರಾದ ಎ. ಬಿ. ದೇಸಾಯಿ, ಬಿ. ಡಿ. ಪಾಟೀಲ, ಎಸ್. ಟಿ. ಪಾಟೀಲ ಲಿಂಗನೂರ, ಗುರಲಿಂಗಪ್ಪ ಅಂಗಡಿ, ರಮೇಶ ಜಕರಡ್ಡಿ, ಮುಖಂಡರಾದ ಕೆ. ಎಚ್. ಮುಂಬಾರೆಡ್ಡಿ, ಬಸವರಾಜ ದೇಸಾಯಿ, ಜಿ. ಡಿ. ದೇಸಾಯಿ, ಕಾಳಗಿ ಶೆಟ್ಟರ ಸುತ್ತಮುತ್ತ ಗ್ರಾಮಸ್ಥರು. ಎಸ್. ಎಸ್. ಎಂಜಿನಿಯರ್ ಯೋಜನೆ ಉಪಾಧ್ಯಕ್ಷ ಅನಿರುದ್ಧ ಕುಲಕರ್ಣಿ, ಕಾರ್ಖಾನೆಯ ಪ್ರದಾನ ವ್ಯವಸ್ಥಾಪಕರ ಜಯರಾಮ ಆಚಾರ್ಯ, ಪ್ರಭಾರ ವ್ಯವಸ್ಥಾಪಕ ಎಂ. ಬಿ. ಶೆಟ್ಟಿ, ಮುಖ್ಯ ಲೆಕ್ಕಾಧಿಕಾಧಿಕಾರಿ ಎಸ್. ಬಿ. ಗೋಟಖಿಂಡಿ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

      ಸಚಿವ ಎಂಬಿಪಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ:

      ಕೈಗಾರಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ, ರೈತರು, ಕಾರ್ಖಾನೆ ಪದಾಧಿಕಾರಿಗಳು, ಕಾರ್ಮಿಕರು ಹಾಗೂ ಮುಖಂಡರೊಂದಿಗೆ ಕಾರ್ಖಾನೆ ಕಾರ್ಯಾರಂಭ ಮಾಡುವ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದ ಕಾರ್ಮಿಕರು ಈ ವರ್ಷ ಕಬ್ಬು ನುರಿಸಲು ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಕೈಮುಗಿದು ಮನವಿ ಮಾಡಿದರು.

      ಸಚಿವ ಎಂಬಿಪಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ*: ಕೈಗಾರಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ, ರೈತರು, ಕಾರ್ಖಾನೆ ಪದಾಧಿಕಾರಿಗಳು, ಕಾರ್ಮಿಕರು ಹಾಗೂ ಮುಖಂಡರೊಂದಿಗೆ ಕಾರ್ಖಾನೆ ಕಾರ್ಯಾರಂಭ ಮಾಡುವ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ಪದಾಧಿಕಾರಿಗಳು, ರೈತ ಮುಖಂಡರು, ಎಂಜಿನಿಯರಿಂಗ್ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.

      3 ಮತ್ತು 4 ಸಚಿವ ಎಂಬಿಪಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ*: ಕೈಗಾರಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಬಾಯ್ಲರ್ ಇಎಸ್ಪಿ ಕುಸಿತವಾದ ಸ್ಥಳವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಾಸಕ ಜೆ. ಟಿ. ಪಾಟೀಲ, ರೈತರು, ಕಾರ್ಖಾನೆ ಪದಾಧಿಕಾರಿಗಳು, ಕಾರ್ಮಿಕರು ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಇಂಡಿ ಪೊಲೀಸ್ ಠಾಣೆಯಲ್ಲಿ ಅ.19ರಂದು ಮುಟ್ಟುಗೋಲು ಹಾಕಿಕೊಂಡ ದ್ವಿಚಕ್ರ ವಾಹನಗಳ ಹರಾಜು..!ô

      ಇಂಡಿ ಪೊಲೀಸ್ ಠಾಣೆಯಲ್ಲಿ ಅ.19ರಂದು ಮುಟ್ಟುಗೋಲು ಹಾಕಿಕೊಂಡ ದ್ವಿಚಕ್ರ ವಾಹನಗಳ ಹರಾಜು..!ô

      0
      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      0
      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      October 14, 2026
      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      October 12, 2026
      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      October 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.