ಭೀಮಾತೀರದಲ್ಲಿ ತಂದೆಯನ್ನು ಕೊಂದ ಪಾಪಿ ಮಗ..! ಕಾರಣ..?
ಇಂಡಿ : ತನ್ನ ಪಾಲಿನ ಆಸ್ತಿ ಕೊಡದಿದ್ದಕ್ಕೆ ಕುಪಿತಗೊಂಡ ಮಗನೇ ಸ್ವಂತ ತಂದೆಯನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಇಂಡಿ ತಾಲೂಕಿನ ಚಿಕ್ಕಮನೂರ ಗ್ರಾಮದಲ್ಲಿ ನಡೆದಿದೆ, ಮೃತನನ್ನು ಲಕ್ಷ್ಮಣ್ ಮ್ಯಾಗೇರಿ ವಯಾ 65 ಎಂದು ಗುರುತಿಸಲಾಗಿದ್ದು ನೂತನ ಮಗ ಪ್ರಕಾಶ್ ಮ್ಯಾಗೇರಿ ವಯಾ (33) ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕಾಶ್ ಮ್ಯಾಗೇರಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಈ ಕುರಿತು ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ.


















