ಇಂಡಿ : ಹಳಸದ ಅನ್ನವಿಲ್ಲ ಅದು ಹಳಸುವ ಮುನ್ನ ಊಟಮಾಡಬೇಕು, ಬಾಡದ ಹೂವಿಲ್ಲ ಅದು ಬಾಡುವ ಮುನ್ನ ಮುಡಿಯಬೇಕು, ಕೆಡಲಾರದ ಹಣ್ಣುಗಳಿಲ್ಲ ಅವು ಕೇಡುವ ಮುನ್ನ ಸೇವಿಸಬೇಕು, ಸಾಯದ ಮನುಷ್ಯನಿಲ್ಲ ಸಾಯುವ ಮುನ್ನ ಸತ್ತ ಕಿರ್ತ್ತಿಯನ್ನು ಪಡೆಯಬೇಕು ಎಂದು ಗ್ರಾಮದ ಹಿರಿಯಾರಾದ ಗುರಪ್ಪ ಗೊಂಗಿ ಹೇಳಿದರು.
ತಾಲೂಕಿನ ತಾಂಬಾ ಗ್ರಾಮದಲ್ಲಿ ಸಂತ ಹಜರತ ದಾವಲಮಲಿಕ ದೇವರ ಮುಕ್ತಿ ಕೇಂದ್ರದಲ್ಲಿ ಜರುಗಿರುವ ಉರುಸು ಕಾರ್ಯಕ್ರಮದಲ್ಲಿ ಮಾತನಾಡಿ ಗುಡಿ ಗುಂಡಾರಗಳು ಧಾರ್ಮಿಕತೆ ಸಂಕೇತವಾಗಿದ್ದು ಮನುಷ್ಯನಲ್ಲಿ ನ್ಯಾಯ, ನೀತಿ, ಸಂಪ್ರದಾಯ, ಸಂಸ್ಕಾರ ಕಲಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿವೆ. ಸಮಾಜದಲ್ಲಿ ಸಮಾನತೆಯಿಂದ ಬಾಳುವ ಪಾಠ ನೀಡುತ್ತವೆ ಎಂದರು.
ಸಿದ್ದು ಹತ್ತಳ್ಳಿ ಮಾತನಾಡಿ ಭಗವಂತ ಒಬ್ಬನೇ ಇದ್ದಾನೆ, ಆತ ವೀರ ಧೀರ ಪೀರನಾಗಿದ್ದು ಆತ ‘ಸಬ್ ಕಾಮಲಿಕ್ ಏಕ್ ಹೈ’ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ದೇಶ ಜಗತ್ತನಲ್ಲಿಯೇ ತನ್ನದೆಯಾದ ವಿಶಷ್ಟ ಸಂಸ್ಕçತಿ ಹೊಂದಿದೆ, ದೇಶ ಧರ್ಮ ಪಂಗಡಗಳಿAದ ಕೂಡಿದ ವಿಶಿಷ್ಠ ಆಚಾರ ವಿಚಾರಗಳನ್ನು ಹೊಂದಿದ ದೇಶವಾಗಿದೆ. ಗ್ರಾಮೀಣ ಭಾಗದಲ್ಲಿ ಎಲ್ಲ ಜನರು ಒಂದುಕಡೆ ಸೇರಿ ಜಾತ್ರೆಗಳು, ಹಬ್ಬಗಳು ಅಚರಣೆ ಮಾಡುವದರಿಂದ ಜಾತ್ಯಾತೀತ ಮನೋಭಾವನೆ ಮತ್ತು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಸಮಾಜದಲ್ಲಿ ಬದುಕು ಸಾಗಿಸಲು ಅನುಕೂಲವಾಗಿವೆ. ಇಂದು ಗ್ರಾಮೀಣ ಭಾಗದಲ್ಲಿ ಆನೇಕ ಸಮುದಾಯಗಳು ಕಷ್ಟ ಸುಖ: ಎರಡನ್ನು ಸಮಾನವಾಗಿ ಹಂಚಿಕೊAಡು ಗೌರವಯುತವಾಗಿ ಬದುಕುತ್ತಿರುವುದು ಸಂತೋಷವೆನಿಸುತ್ತದೆ. ಇಂತಹ ಧಾರ್ಮಿಕ ಆಚರಣೆಗಳು ನಾಡಿನಾದ್ಯಂತ ಪಸರಿಸಲ್ಲಿ ಮತ್ತು ಹಜರತ್ ದಾವಲ್‌ಮಲೀಕ್ ದೇವರು ರೈತರ ಬಾಳಿಗೆ ಸುಖ: ಶಾಂತಿಯನು ಮತ್ತು ಮುಂಬರುವ ದಿನಗಳಲ್ಲಿ ಮೇಘರಾಜನ ಕೃಪೆ ಕರುಣ ಸಲಿ ಎಂದು ಪ್ರಾರ್ಥಿಸಿದರು.
ಜಾತ್ರಾ ಕಾರ್ಯಕ್ರಮದಲ್ಲಿ ರಾಜು ಗಂಗನಳ್ಳಿ, ರಾಜಾಸಾಬ ಬಡಿಗೇರ, ಸತೀಶ ಹಿರೇಕುರಬರ, ಸಲಿಂ ಚಿಕ್ಕಗಸಿ, ನೀಲಪ್ಪ ಕಿಣಗಿ, ಬಸಪ್ಪ ಚಿಂಚೋಳಿ, ಬಂದು ಇಂಡಿ, ಬಸವರಾಜ ಹದರಿ, ನಾಗಪ್ಪ ಗೊಂಗಿ, ಬಸನಿಂಗ ಕುಂಬರ, ಬಸು ಹೊರಪೇಟಿ, ಶಿವಪ್ಪ ನಾಟೀಕಾರ, ಹುಸೇನಸಾಬ ಇಂಡಿ, ಮಹಾದೆವಪ್ಪ ಕುಂಬಾರ, ಮಲ್ಕಪ್ಪ ಶಿಕಾರಿ, ಇದ್ದರು.
ತಾಂಬಾ ಗ್ರಾಮದ ಸಂತ ಹಜರತ ದಾವಲಮಲಿಕ ದೇವರ ಮುಕ್ತಿ ಕೇಂದ್ರದಲ್ಲಿ ಜರುಗಿರುವ ಉರುಸು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು.


















