ಎನ್ ಪಿ ಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ತನ್ನಿ..!
ಇಂಡಿ : ರಾಜ್ಯ ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್.ಪಿ.ಎಸ್ ರದ್ದುಗೊಳಿಸಿ ಓ.ಪಿ.ಎಸ್ ಜಾರಿಗೊಳಿಸುವ ಭರವಸೆಯನ್ನು ಇತ್ತೀಚಿಗೆ ಸರಕಾರ ನೀಡಿದ್ದು, ಶೀಘ್ರದಲ್ಲಿಯೆ ಹಳೆಯ ನಿಶ್ಚಿತ ಪಿಂಚಣಿ ಜಾರಿಗೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳು ಪಿಂಚಣಿ ವಂಚಿತ ನೌಕರ ಸಂಘಟನೆಯ ತಾಲೂಕು ಘಟಕದಿಂದ ಶಿರಸ್ತೆದಾರ ಎಸ್ ಆರ್ ಮುಜಗೊಂಡ ಅವರ ಮೂಲಕ ಮುಖ್ಯ ಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಶನಿವಾರ ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಆಗಿಮಿಸಿ ಮನವಿ ಸಲ್ಲಿಸಿ, ತಾಲ್ಲೂಕು ಘಟಕದ ಅಧ್ಯಕ್ಷ ಜೆ ಎಂ ಕಡಣಿ ಮಾತನಾಡಿದ ಅವರು, ಓ.ಪಿ.ಎಸ್ ಯೋಜನೆ ಕೂಡಲೇ ಜಾರಿಗೆಗೊಳಿಸಬೇಕು. ವಿಳಂಬವಾದಲ್ಲಿ ರಾಜ್ಯ ಸರಕಾರಿ ನೌರರಿಗೆ ನೀಡುತ್ತಿರುವಂತೆ ಎನ್.ಪಿ.ಎಸ್ನ್ನು ಯಥಾವತ್ತಾಗಿ ಜಾರಿ ಮಾಡುವುದು. ಹಾಗೆ ನೇಮಕಾತಿ, ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರಕಾರವು ಭರಿಸಲು ಕ್ರಮ ವಹಿಸಬೇಕು ಎಂದು ಹೇಳಿದರು. ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ (ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ) ವಿಧೇಯಕ 2014 ಕ್ಕೆ ತಿದ್ದುಪಡಿ ಮಾಡುವ ಅಥವಾ ರದ್ದುಪಡಿಸಿ ಭವಿಷ್ಯಾವರ್ತಿಯಾಗಿ ಜಾರಿಗೆ ಬರುವಂತೆ ಕ್ರಮ ವಹಿಸುವುದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್ ಎಂ ಮೇತ್ರಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕೋಡಿ, ಖಜಾಂಚಿ ರಮೇಶ ಜೆ ಬಗಲಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಎನ್ ಎಂ ಕಾಳೆ, ಜೆ ಎಸ್ ದೇವರಮನಿ, ಹಾಗೂ ಸಿಬ್ಬಂದಿ ವರ್ಗ ಡಿ ಎಸ್ ಕುಲಕರ್ಣಿ, ಟಿ ಟಿ ಐರೋಡಗಿ, ವಾಯ್. ಜಿ ಬಿರಾದಾರ, ಎಸ್ ಎಸ್ ಸರ್ಜನವರ, ಎಸ್ ಬಿ ಗಧ್ಯಾಳ, ವಾಯ್ ಎಂ ಬಾಗೇವಾಡಿ, ಡಿ ಎ ರಾಠೋಡ, ಬಿ ಎಸ್ ಹಿರೇಮಠ ಇನ್ನೂ ಅನುದಾನಿತ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


















