ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಇಂಡಿ ತಾಲ್ಲೂಕು ಅಧ್ಯಕ್ಷರಾಗಿ ತಮ್ಮರಾಯ ಆಯ್ಕೆ
ಇಂಡಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು
ಸೇನೆಯ ಇಂಡಿ ತಾಲೂಕಾ ಅಧ್ಯಕ್ಷರಾಗಿ ತಮ್ಮಾರಾಯ
ಆಸಂಗಿ ಅವರನ್ನು ಆಯ್ಕೆ ಮಾಡಿ ಜಿಲಾಧ್ಯಕ್ಷ ಎಸ್.ಬಿ.
ಕೆಂಬೋಗಿ ಆದೇಶ ಪತ್ರ ನೀಡಿದ್ದಾರೆ.
ಇಂಡಿ ಪಟ್ಟಣದ ಹಳೆ ತಹಶೀಲ್ದಾರ ಕಛೇರಿ ಹತ್ತಿರ ಇರುವ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಛೇರಿಯಲ್ಲಿ
ಇಂಡಿ ತಾಲೂಕಾ ನೂತನ ಅಧ್ಯಕ್ಷರಾಗಿ ತಮ್ಮಾರಾಯ
ಆಸಂಗಿ ಅವರನ್ನು ಆಯ್ಕೆ ಮಾಡಿದರು. ನಂತರ ಜಿಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಮಾತನಾಡಿದ
ಅವರು, ತಾಲೂಕ ರೈತರ ಆಶೋತ್ತರಗಳಿಗೆ
ಸ್ಪಂದಿಸುವ ಹಾಗೂ ಅವರ ಸಮಸ್ಯೆಗಳಿಗೆ
ಧ್ವನಿಯಾಗಬೇಕು ನಿಲ್ಲಬೇಕು. ರಾಜ್ಯ ರೈತ ಸಂಘವು
ಕೆಲವು ಸೈದ್ದಾಂತಿಕ ವಿಚಾರಗಳನ್ನು
ಮೈಗೂಡಿಸಿಕೊಂಡಿದ್ದು, ಈ ವಿಚಾರಗಳಿಗೆ ಮತ್ತು
ಸಂವಿಧಾನ ಬದ್ದ ನೀತಿ ನಿಯಮಗಳನ್ನು ಗಾಳಿಗೆ
ತೋರದೆ ಶಿಸ್ತಿನಿಂದ ಕೆಲಸ ಮಾಡುವ ಅವಶ್ಯಕತೆ ಇದೆ.
ಯಾವುದೇ ಮತ ಜಾತಿಗಳಿಗೆ ಮತ್ತು ಯಾವುದೇ
ರಾಜಕೀಯ ಪಕ್ಷಗಳ ಸೋಂಕಿಲ್ಲದೇ ಪ್ರಾಮಾಣಿಕವಾಗಿ
ಸಂಘ ನೀಡಿರುವ ಜವಾಬ್ದಾರಿ ಹುದ್ದೆಯನ್ನು ನಿಷ್ಠೆಯಿಂದ
ಮಾಡಬೇಕೆಂದು ಹೇಳಿದರು.
ಇಂಡಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು
ಸೇನೆಯ ಇಂಡಿ ತಾಲೂಕಾ ಅಧ್ಯಕ್ಷರಾಗಿ ತಮ್ಮಾರಾಯ ಆಸಂಗಿ