ಜಿಲ್ಲೆಯ ಅಭಿವೃದ್ಧಿಗೆ ಅಪ್ಪಣ್ಣ ಹೊನ್ನಾಕಟ್ಟಿಗೆ ಗೆಲ್ಲಿಸಿ : ತೊಂಟಾಪುರ
ಇಂಡಿ: 2024 ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಸಮಾಜ ಪಾರ್ಟಿಯ ಅಭ್ಯರ್ಥಿ ರಾಜಕುಮಾರ ಅಪ್ಪಣ್ಣ ಹೊನ್ನಾಕಟ್ಟಿ ಅವರನ್ನು ಗೆಲ್ಲಿಸಿ ಜಿಲ್ಲೆಯ ಅಭಿವೃಧ್ಧಿಗೆ ಕೈಜೋಡಿಸಿ ಎಂದು ರಾಷ್ಟ್ರೀಯ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಧರ್ಮಣ್ಣ ತೊಂಟಾಪೂರ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಷ್ಟ್ರೀಯ ಸಮಾಜ ಪಕ್ಷ 2003 ರಲ್ಲಿ ಸ್ಥಾಪನೆಯಾಗಿದ್ದು ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಆದರೆ ಕರ್ನಾಟಕದ ಎರಡು ಜಿಲ್ಲೆಗಳಾದ ವಿಜಯಪೂರ ಹಾಗೂ ಬೀದರ್ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ತಿಳಿಸಿದರು. ರಾಷ್ಟ್ರೀಯ ಸಮಾಜ ಪಕ್ಷ ಅಹಿಂದ ಸಮಾಜಕ್ಕೆ ಹೆಚ್ಚಿನ ಒತ್ತು ನೀಡಲಿದೆ. ರಾಷ್ಟ್ರೀಯ ಪಕ್ಷಗಳು ಅಹಿಂದ ಸಮಾಜವನ್ನು ಕಡೆಗಣಿಸುತ್ತಿವೆ. ಹೀಗಾಗಿ ಅಹಿಂದ ವರ್ಗದ ಜನ ರಾಷ್ಟ್ರೀಯ ಸಮಾಜ ಪಕ್ಷದ ಕಡೆಗೆ ವಾಲುತ್ತಿದ್ದುನಾವೆಲ್ಲ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ ಎಂದರು.
ಡಾ. ಗೋಪಾಲ ಪಾಟೀಲ್ ಮಾತನಾಡಿ, ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿ ರಾಜಕುಮಾರ ಹೊನ್ನಾಕಟ್ಟಿ ಹುಟ್ಟಿದ್ದು ಪವಾಡ ಮಾಡಿದ ಊರಾದ ಇಂಗಳಗಿ ಗ್ರಾಮದಲ್ಲಿ, ಹಿಂದೆ ಇಂಗಳಗಿ ಗ್ರಾಮದ ಮಲ್ಲೇಶಪ್ಪ ಬಳಬಟ್ಟಿ ಅವರು ಕಂಬಳಿ ಬೀಸಿ ಮಳೆ ತರಿಸಿ ಪವಾಡ ಮಾಡಿದ್ದರು. ಅಂತಹ ಊರಿನಲ್ಲಿ ಜನಿಸಿದ ರಾಜಕುಮಾರ ಅವರು ಅತೀ ಹೃದಯವಂತ
ಮನುಷ್ಯರಾಗಿದ್ದಾರೆ. ತಮ್ಮಲ್ಲಿರುವ ಎರಡು ಎಕರೆ
ಜಮೀನಿನಲ್ಲಿ ಒಂದು ಎಕರೆ ಜಮೀನನ್ನು ಗೋಶಾಲೆಗೆ ದಾನ ಮಾಡಿ ಉದಾರತೆ ಮೆರೆದಿದ್ದಾರೆ. ಅಂತಹವರಿಗೆ ಮತದಾನ ಮಾಡಿ ಆರಿಸಿ ತಂದರೆ ಅವರು ಈ ಜಿಲ್ಲೆಯ ಅಭಿವೃಧ್ಧಿ ಮಾಡುವುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯ
ಅಭಿವೃಧ್ಧಿಗೆ ರಾಷ್ಟ್ರೀಯ ಸಮಾಜ ಪಕ್ಷವನ್ನು
ಬೆಂಬಲಿಸಬೇಕೆಂದು ಮನವಿ ಮಾಡಿದರು.
ಅಭ್ಯರ್ಥಿ ರಾಜಕುಮಾರ ಹೊನ್ನಾಕಟ್ಟಿ ಮಾತನಾಡಿ, ನಾನು ಇಂಡಿ ತಾಲೂಕಿನವನಾಗಿದ್ದು, ಸಾರ್ವಜನಿಕ ವಲಯದಲ್ಲಿ ಸೇವೆ ಮಾಡುತ್ತ ಮೂವತ್ತು ವರ್ಷ ಕಳೆದಿದ್ದೇನೆ. ನನಗೆ ಈ ಬಾರಿ ರಾಷ್ಟ್ರೀಯ ಸಮಾಜ ಪಕ್ಷ ಟಿಕೆಟ್ ನೀಡಿದೆ. ಜಿಲ್ಲೆಯ ಜನನನ್ನನ್ನು ಬೆಂಬಲಿಸಿ ಆಶೀರ್ವಾದ ಮಾಡಿದರೆ ಜಿಲ್ಲೆಯ ಅಭಿವೃಧ್ಧಿಗೆ ಶ್ರಮಿಸುವೆ ಎಂದು ತಿಳಿಸಿದರು. ಜಿಲ್ಲೆಯಲ್ಲಿನ 13 ತಾಲೂಕುಗಳಲ್ಲಿಯೂ ಸಹ ಇಂಜನೀಯರಿಂಗ ಹಾಗೂ ಮೆಡಿಕಲ್ ಕಾಲೇಜುಗಳನ್ನು ತೆರೆಯುವ ಇಛ್ಛೆ ಹೊಂದಿದ್ದು, ಜಿಲ್ಲೆಯಲ್ಲಿ ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡುವ ಮನಸ್ಸು ಇದೆ. ಹೀಗಾಗಿ ಜಿಲ್ಲೆಯ
ಜನ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕ ಕರಜಗಿ, ಲಾಲಸಾಬ
ಮುಲ್ಲಾ ಇದ್ದರು.
ಇಂಡಿ: ರಾಷ್ಟರೀಯ ಸಮಾಜ ಪಕ್ಷದ ರಾಜ್ಯಾಧ್ಯಕ್ಷ
ಧರ್ಮಣ್ಣ ತೊಂಟಾಪೂರ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದರು.



















