ಶ್ರೀಶೈಲ ಎಸ್. ಬಿರಾದಾರ ವಿಭಾಗಿಯ ಅಧ್ಯಕ್ಷರಾಗಿ ಆಯ್ಕೆ..!
ಇಂಡಿ: ಪಟ್ಟಣದ ಬೀರಪ್ಪ ನಗರದ ನಿವಾಸಿ ಶ್ರೀಶೈಲ ಎಸ್. ಬಿರಾದಾರ ಅವರನ್ನು ಇಂಡಿ ತಾಲ್ಲೂಕು ಯುವ ಜನತಾದಳ (ಜಾತ್ಯಾತೀತ) ವಿಭಾಗಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಪಕ್ಷದ ಮುಖಂಡರಾದ ಬಿ.ಡಿ. ಪಾಟೀಲ್ ಅವರ ಶಿಫಾರಸಿನ ಮೇರೆಗೆ ನೇಮಕ ಮಾಡಿ ರಾಜ್ಯ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇಮಕಾತಿ ಆದೇಶ ನೀಡಿದ್ದಾರೆ. ಪಕ್ಷದ ತತ್ವ ಹಾಗೂ ಸಿಧ್ಧಾಂತಗಳಿಗೆ ಬಧ್ಧರಾಗಿ ಇಂಡಿ ತಾಲೂಕಿನಲ್ಲಿ ಯುವ ಜನತಾದಳ ವಿಭಾಗವನ್ನು ಪರಿಣಾಮಕಾರಿಯಾಗಿ ಸಂಘಟಿಸಿ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಇಂಡಿ: ಶ್ರೀಶೈಲ ಎಸ್. ಬಿರಾದಾರ ಭಾವಚಿತ್ರ.



















