Voice Of Janata : Sports News : IPL 2024
RCB VS KKR TODAY LIVE :7:30 PM
IPL 2024 : ಇಂದಿನ ಪಂದ್ಯ: ಅಪಾಯಕಾರಿ ಕೆಕೆಆರ್ ವಿರುದ್ಧ ಆರ್ ಸಿ ಬಿ ಮುಖಾಮುಖಿ..!
ಬೆಂಗಳೂರು: ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಅಪಾಯಕಾರಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಶುಕ್ರವಾರ (ಮಾರ್ಚ್ 29) ಪೈಪೋಟಿ ನಡೆಸಲು ಸಜ್ಜಾಗಿದೆ.ತವರಿನಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಆಡಿದ ಮೊದಲ ಪಂದ್ಯದಲ್ಲಿ ಪ್ರವಾಸಿ ಪಂಜಾಬ್ ಕಿಂಗ್ಸ್ ಎದುರು 4 ವಿಕೆಟ್ಗಳ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿರುವ ಆರ್ ಸಿ ಬಿ ಇಂದು 7:30 ಕ್ಕೆ ಕೆಕೆಆರ್ ವಿರುದ್ಧ ಸೆಣಸಾಟ ನಡೆಸುತ್ತಿದೆ.
ತನ್ನ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಗೆದ್ದು ಬೀಗಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಇದೀಗ ಆರ್ಸಿಬಿ ಎದುರು ಅಬ್ಬರಿಸಲು ಎದುರು ನೋಡುತ್ತಿದೆ.
ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11
ಫಾಫ್ ಡು ಪ್ಲೆಸಿಸ್ (ಓಪನರ್/ ನಾಯಕ),ವಿರಾಟ್ ಕೊಹ್ಲಿ (ಓಪನರ್), ಕ್ಯಾಮರೂನ್ ಗ್ರೀನ್ (ಆಲ್ರೌಂಡರ್), ರಜತ್ ಪಾಟಿದಾರ್ (ಬ್ಯಾಟರ್),ಗ್ಲೆನ್ ಮ್ಯಾಕ್ಸ್ವೆಲ್ (ಆಲ್ರೌಂಡರ್),ಅನುಜ್ ರಾವತ್ (ವಿಕೆಟ್ಕೀಪರ್/ ಬ್ಯಾಟರ್), ದಿನೇಶ್ ಕಾರ್ತಿಕ್ (ಬ್ಯಾಟರ್), ಮಯಾಂಕ್ ದಾಗರ್ (ಆಲ್ರೌಂಡರ್),ಲಾಕಿ ಫರ್ಗುಸನ್ (ಬಲಗೈ ವೇಗಿ),ಯಶ್ ದಯಾಳ್ (ಎಡಗೈ ವೇಗಿ),ಮೊಹಮ್ಮದ್ ಸಿರಾಜ್ (ಬಲಗೈ ವೇಗಿ)
ಕೆಕೆಆರ್ ತಂಡದ ಪ್ಲೇಯಿಂಗ್ 11
ಫಿಲ್ ಸಾಲ್ಟ್ (ಓಪನರ್), ಸುನಿಲ್ ನರೈನ್ (ಆಲ್ರೌಂಡರ್), ವೆಂಕಟೇಶ ಅಯ್ಯರ್ (ಆಲ್ರೌಂಡರ್), ಶ್ರೇಯಸ್ ಅಯ್ಯರ್ (ನಾಯಕ/ ಬ್ಯಾಟರ್),ನಿತೀಶ್ ರಾಣಾ (ಬ್ಯಾಟರ್), ರಮಣದೀಪ್ ಸಿಂಗ್ (ಆಲ್ರೌಂಡರ್),ರಿಂಕು ಸಿಂಗ್ (ಬ್ಯಾಟರ್), ಆಂಡ್ರೆ ರಸೆಲ್ (ಆಲ್ರೌಂಡರ್),ಮಿಚೆಲ್ ಸ್ಟಾರ್ಕ್ (ಎಡಗೈ ವೇಗಿ), ಹರ್ಷಿತ್ ರಾಣಾ (ಬಲಗೈ ವೇಗಿ), ವರುಣ್ ಚಕ್ರವರ್ತಿ (ಮಿಸ್ಟರಿ ಸ್ಪಿನ್ನರ್)