ಭೀಮಾತೀರ : ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ, ಶೇ. 76.09 ಮತದಾನ
ಶಾಸಕ ಯಶವಂತರಾಯಗೌಡ ಪಾಟೀಲ್ ಮತದಾನ..
ಇಂಡಿ : ಬಿರು ಬಿಸಿಲಿನಲ್ಲಿ ಜೋರು ಮತದಾನ ತಾಲ್ಲೂಕಿನ ಮರಗೂರ ಭೀಮಾಶಂಕರ ಸಕ್ಕರೆ ಅಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ನಡೆಯಿತು. ಇನ್ನೂ ಶಾಸಕ ಯಶವಂತರಾಯಗೌಡ ಪಾಟೀಲ್ ಬೆಳಿಗ್ಗೆ ಆಗಮಿಸಿ ಮತದಾನ ಮಾಡಿದರು.
ವಿಜಯಪುರ ಜಿಲ್ಲೆಯ ನೂತನ ಚಡಚಣ ತಾಲ್ಲೂಕಿನ ಮರಗೂರ ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ, 2024 ರಿಂದ 29 ನೇ ಸಾಲಿನ ಅವಧಿವರೆಗೆ ನಡೆದ ಆಡಳಿತ ಮಂಡಳಿ ಚುನಾವಣೆಯ ಹಿನ್ನೆಲೆಯಲ್ಲಿ, ಭಾನುವಾರ ಬೆಳಿಗ್ಗೆ 9 ಘಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯಿತು. ಈ ಚುನಾವಣೆಯಲ್ಲಿ ಹಾಲಿ ಮತ್ತು ಮಾಜಿ ಮದ್ಯ ತೀವ್ರ ಪೈಪೋಟಿ ಎದ್ದು ಕಾಣುತ್ತಿದ್ದಿದ್ದು, ಮತದಾರ ಪ್ರಭುಗಳು ಗೌಪ್ಯ ಮತದಾನ ಮಾಡಿದ್ದಾರೆ. ಅದಲ್ಲದೇ ಒಟ್ಟಾರೆಯಾಗಿ 2660 ಮತದಾರರಲ್ಲಿ ಇಲ್ಲಿಯವರೆಗೆ 2024 ಮತದಾನ ಮಾಡಿದರು. 5 ಘಂಟೆಯ ನಂತರ ಮತ ಎಣಿಕೆ ಪ್ರಕ್ರೀಯೆ ಪ್ರಾರಂಭವಾಗಿದೆ.