ಕಾರ್ಖಾನೆ ಚುನಾವಣೆಯಲ್ಲಿ ಶಾಸಕರ ಪೆನಲ್ ಗೆಲ್ಲೊದು ಶತಃಸಿದ್ದ : ನಿರ್ದೇಶಕ ಎಂ.ಆರ್. ಪಾಟೀಲ
ಇಂಡಿ: ಮರಗೂರದ ಭೀಮಾಶಂಕರ ಸಕ್ಕರೆ ಕಾರ್ಖಾನೆ
ಕಟ್ಟಿ ಬೆಳೆಸಿದ ಯೋಗ್ಯರಿಗೆ ಮತದಾನ ಮಾಡುವ
ಮೂಲಕ ಕಾರ್ಖಾನೆಯನ್ನು ಇನ್ನಷ್ಟು ಅಭಿವೃಧ್ಧಿಪಡಿಸಲು ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ
ನಿರ್ದೇಶಕ ಎಂ.ಆರ್. ಪಾಟೀಲ ಬಳ್ಳೊಳ್ಳಿ ಮನವಿ ಮಾಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕಾರ್ಖಾನೆಯಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕಾದರೆ
ಎಲ್ಲರ ಸಹಮತವಿರಬೇಕು. ಆದರೆ ಕೆಲವರು
ಬೇಕಂತಲೇ ಅಭಿವೃದ್ದಿಗೆ ಅಡ್ಡಗಾಲು ಹೊಡೆಯುತ್ತಾರೆ. ಅಂತಹವರಿಗೆ ಕಾರ್ಖಾನೆಯ ಶೇರುದಾರರು ಮತದಾನ ಮಾಡಬಾರದು ಎಂದು ವಿನಂತಿಸಿದರು. ಯಶವಂತರಾಯಗೌಡ ಪಾಟೀಲರ ನೇತೃತ್ವದ ಪೆನಲ್ಗೆ ಅಭೂತಪೂರ್ವ ಬೆಂಬಲ ಸಿಗುತ್ತಿದ್ದು, ಪೆನಾಲಿನ ಎಲ್ಲ ಅಭ್ಯರ್ಥಿಗಳ ಗೆಲುವು ಶತಸಿದ್ಧವಾಗಿದೆ ಎಂದರು.
ಕಾರ್ಖಾನೆಯ ಬಗ್ಗೆ ಅತೀವ ಕಾಳಜಿ ಹೊಂದಿದ ಹಾಗೂ
ಕಾರ್ಖಾನೆಯನ್ನು ಕಟ್ಟಿ ಇನ್ನಷ್ಟು ಉತ್ತಮವಾಗಿ
ಬೆಳೆಸುವ ಗುರಿ ಹೊಂದಿದ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಹಾಗೂ ಅವರ
ನೇತೃತ್ವದ ಎಲ್ಲಾ ಅಭ್ಯರ್ಥಿಗಳಿಗೆ ಮತದಾನ ಮಾಡಿ
ಐತಿಹಾಸಿಕ ಗೆಲುವು ಸಾಧಿಸಲು ಸಹಕರಿಸಬೇಕು ಎಂದರು.
ಇಂಡಿ: ಎಂ.ಆರ್. ಪಾಟೀಲ ಬಳ್ಳೊಳ್ಳಿ ಅವರ ಭಾವಚಿತ್ರ.