ಭಾರತದ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು : ಪ್ರಾಚಾರ್ಯರು ಡಾ. ಎಸ್ ಬಿ ಜಾಧವ
ಇಂಡಿ: ಪಟ್ಟಣದ ಎಸ್.ಎಸ್.ವಿ.ವಿ. ಸಂಘದ ಜಿ.ಆರ್. ಗಾಂಧಿ ಕಲಾ, ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್, ಯುತ್ ರೆಡ್‍ಕ್ರಾಸ್ ಹಾಗೂ ಸ್ಕೌಟ್ಸ್ & ಗೈಡ್ಸ್ ಘಟಕಗಳ ಅಡಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯಯುವ ದಿನಾಚರಣೆ ಕಾರ್ಯಕ್ರಮ
ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಂಬಾ ಗ್ರಾಮದ ಎಸ್.ಆರ್. ಮಾಳಗೆ ಕಲಾ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಶಿವಾನಂದ ವಾಲೀಕಾರ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ವ್ಯಕ್ತಿತ್ವ ಕೋಟಿ ಕೋಟಿ ಯುವಕರಿಗೆ ಪ್ರೇರಣೆಯ ಚಿಲುಮೆಯಾಗಿದೆ.ಅವರು ಭಾರತ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಪಸರಿಸಿದ ಧೀಮಂತ ನಾಯಕರು. 1893 ರಲ್ಲಿ ಚಿಕ್ಯಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಭಾಷಣ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಡಾ.
ಎಸ್.ಬಿ. ಜಾಧವ ಮಾತನಾಡಿ, ಸ್ವಾಮಿ ವಿವೇಕಾನಂದ ಭಾರತದ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಒಬ್ಬರು ಆಧ್ಯಾತ್ಮದ ಮಾರ್ಗ ಅನುಸರಿಸಿದರು. ಅವರ ಉದ್ದೇಶವು ಭಾರತದ ಏಳಿಗೆ ಆಗಿತ್ತು ಎಂದು ಹೇಳಿದರು.
ಉಪನ್ಯಾಸಕ ಬಿ.ಹೆಚ್. ಬಗಲಿ ಮಾತನಾಡಿ, ಸ್ವಾಮಿ ವಿವೇಕಾನಂದ ಅಂದರೆ ಭಾರತ, ಭಾರತ ಅಂದರೆ ಸ್ವಾಮಿ ವಿವೇಕಾನಂದರು ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸಹಾಯಕ
ಪ್ರಾಧ್ಯಾಪಕ ಡಾ. ಶ್ರೀಕಾಂತ ರಾಠೋಡ, ಸ್ವಾಗತವನ್ನು
ಸಹಾಯಕ ಪ್ರಾಧ್ಯಾಪಕ ಡಾ.ವಿಶ್ವಾಸ ಕೊರವಾರ,
ವಂದನಾರ್ಪಣೆಯನ್ನು ಸಹಾಯಕ ಪ್ರಾಧ್ಯಾಪಕ ಡಾ.
ಸುರೇಂದ್ರ ಕೆ, ಅವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.
ಆನಂದ ನಡವಿನಮನಿ, ಶ್ರೀಶೈಲ ಸಣ್ಣಕ್ಕಿ, ಡಾ. ಸಿ.ಎಸ್. ಬಿರಾದಾರ, ಡಾ. ಜಯಪ್ರಸಾದ ಡಿ, ಎಮ್.ಆರ್. ಕೋಣದೆ, ಆರ್.ಪಿ. ಇಂಗನಾಳ, ಸೇರಿದಂತೆ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ
ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ಇಂಡಿ: ಪಟ್ಟಣದ ಎಸ್.ಎಸ್.ವಿ.ವಿ. ಸಂಘದ ಜಿ.ಆರ್.ಗಾಂಧಿ ಕಲಾ, ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್, ಯುತ್ ರೆಡ್‍ಕ್ರಾಸ್ ಹಾಗೂ ಸ್ಕೌಟ್ಸ್ & ಗೈಡ್ಸ್ ಘಟಕಗಳ ಅಡಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.



















