ಹುಡುಗಾಟದ ಆರೋಪಕ್ಕೆ ಪ್ರತಿಕ್ರಿಯೆ ಇಲ್ಲ, ಯತ್ನಾಳಗೆ ಟಾಂಗ್ ನೀಡಿದ : ಬಿ ವೈ ವಿಜಯೇಂದ್ರ
ವಿಜಯಪುರ: ನನಗೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜವಾಬ್ದಾರಿ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ, ನನಗೆ ಜವಾಬ್ದಾರಿ ನೀಡಿದ್ದು ಯಡಿಯೂರಪ್ಪ ಅಲ್ಲ. ಅಲ್ಲದೇ, 40 ಸಾವಿರ ಕೋಟಿ ಹಗರಣದಲ್ಲಿ ಶಾಸಕ ಯತ್ನಾಳ ಆರೋಪದಲ್ಲಿ ಸತ್ಯ ಇದ್ದರೆ ರಿಯಾಕ್ಷನ್ ಬರುತ್ತದೆ. ಹುಡುಗಾಟದ ಆರೋಪಕ್ಕೆ ಪ್ರತಿಕ್ರಿಯೆ ಇಲ್ಲ ಎಂದು ಯತ್ನಾಳಗೆ ಟಾಂಗ್ ನೀಡಿದರು.
ಪಕ್ಷದ ಎಲ್ಲ ಹಿರಿಯರು ನನ್ನ ಕೈ ಜೋಡಿಸಿದ್ದಾರೆ. ಹಳೆ ವಿಚಾರ ಬದಿಗಿಟ್ಟು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದಿಟ್ಟ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಹೆಜ್ಜೆ ಮುಂದಿಟ್ರೆ ಹಿಂದೆ ಇಡಲ್ಲ. ಒಬ್ಬಿಬ್ಬರ ಮನಸ್ತಾಪ ಇದೆ. ಅದನ್ನು ಸರಿ ಮಾಡ್ತೇವೆ. ಇನ್ನೂ ಕೇಂದ್ರಕ್ಕೆ ನಾವು ಚಾಡಿ ಹೇಳುವ, ದೂರು ಹೇಳುವ ಪ್ರಯತ್ನ ಮಾಡಿಲ್ಲ ಎಂದರು.