ಇಂಡಿ: ಇಂಡಿ ಜಿಲ್ಲೆಯಾದರೆ ಮುಂದೆ ಅಭಿವೃಧ್ಧಿಯಾಗಲು ಸಹಕಾರಿಯಾಗುತ್ತದೆ. ಈಗಾಗಲೇ ಎಲ್ಲ ಮಠಾಧೀಶರು ಹಾಗೂ ಹಿರಿಯ ಸಾಹಿತಿಗಳು ಸೇರಿದಂತೆ ಹಲವರು ಈ ಜಿಲ್ಲಾ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಜಿಲ್ಲಾ ಹೋರಾಟದಲ್ಲಿ ಯಾರೂ ಸಹ ರಾಜಕೀಯ ಮಾಡಲು ಹೋಗಬಾರದು. ಏಕಪಕ್ಷೀಯ ನಿರ್ಧಾರ ಮಾಡಬಾರದು ಎಂದು ಜಿಲ್ಲಾ ಹೋರಾಟ ಸಮೀತಿಯ ಅಧ್ಯಕ್ಷರಾದ ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು ಈಗಾಗಲೇ ಇಂಡಿಯನ್ನು ಜಿಲ್ಲೆ ಮಾಡಬೇಕೆಂದು ಹೋರಾಟ ನಡೆಸಲಾಗುತ್ತಿದೆ. ಅದಕ್ಕೆ ಬಹಳಷ್ಟು ಜನ ಬೆಂಬಲವನ್ನೂ ಸೂಚಿಸುತ್ತಿದ್ದಾರೆ. ಏನೇ ಮಾಡಿದರೂ ಸಹ ಒಂದಷ್ಟು ಜನ ಸೇರಿ ಅಭಿಪ್ರಾಯವನ್ನು ಸಂಗ್ರಹಿಸಿ
ಮುಂದೆ ಹೆಜ್ಜೆ ಇಡಬೇಕು ಎಂದು ಅವರು ತಿಳಿಸಿದರು.
ಗ್ರಾಮೀಣ ಭಾಗದ ಜನರು ಸಹ ಇದಕ್ಕೆ ಬೆಂಬಲ
ಸೂಚಿಸಲು ಮಂದೆ ಬರಬೇಕು. ಇದರಲ್ಲಿ ಪಕ್ಷಪಾತ
ಮತ್ತು ಏಕಪಕ್ಷೀಯ ನಿರ್ಣಯ ಮಾಡಬಾರದೆಂದು
ಶ್ರೀಗಳು ತಿಳಿಸಿದರು.
ಇಂಡಿ: ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚರ್ಯರು.




















