ಸಿಂಧನೂರು: ಕರೋನಾ ಮೂರನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ವೀಕೆಂಡ್ ಲಾಕ್ ಡೌನ್ ಜಾರಿಗೆ ಮಾಡಿದ್ದು, ಈ ಹಿನ್ನಲೆಯಲ್ಲಿ ಸಿಂಧನೂರು ನಗರ ಪೊಲೀಸರು ಕರೋನಾ ಜಾಗೃತಿ ಮೂಡಿಸುತ್ತಿದ್ದಾರೆ. ಸಾರ್ವಜನಿಕರು, ವ್ಯಾಪಾರಸ್ಥರು ವೀಕೆಂಡ್ ಲಾಕ್ ಡೌನ್ ಗೆ ಸಹಕರಿಸಬೇಕು. ಅನಗತ್ಯವಾಗಿ ರಸ್ತೆಗೆ ಬರುವುದು ನಿಲ್ಲಿಸಬೇಕು. ಗಾಂಧಿ ವೃತ್ತದಿಂದ ಪ್ರಮುಖ ರಸ್ತೆಗಳ ಅಂಗಡಿ ಮುಂಗಟ್ಟುಗಳಿಗೆ ಡಿವೈಎಸ್ಪಿ ವೆಂಕಟಪ್ಪ ನಾಯಕ ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಅನವಶ್ಯಕವಾಗಿ ತಿರುಗಾಡುವವರಿಗೆ ಎಚ್ಚರಿಕೆ ನೀಡಿದರು.

ತಪ್ಪದೆ ಎಲ್ಲರೂ ಮಾಸ್ಕ ಧರಿಸಬೇಕು ಎಂದು ಡಿವೈಎಸ್ಪಿ ನಾಯಕ್ ಹೇಳಿದರು. ಅಲ್ದೆ ಜನತೆಗೆ ಮಾಸ್ಕ ವಿತರಣೆ ಮಾಡಿ ಜಾಗೃತಿ ಮೂಡಿಸಿದರು. ಈ ವೇಳೆ ಪ್ರೊಬೆಶನರಿ ಡಿವೈಎಸ್ಪಿ ಲಕ್ಷ್ಮಿಕಾಂತ್ ಆರ್, ಪಿಎಸ್ಐ ಸೌಮ್ಯ, ಬಸವರಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು.



















