ಪಂಚಮಸಾಲಿ 2 ಎ ಮಿಸಲಾತಿಗೆ ಸ್ಪಂದಿಸದಿದ್ದರೆ ಸರಕಾರಕ್ಕೆ ಹೃದಯವಿಲ್ಲದಂತೆ : ಶಾಸಕ ಯಶವಂತರಾಯಗೌಡ ಪಾಟೀಲ…
ಇಂಡಿ : ಪಂಚಮಸಾಲಿ ಅಪೇಕ್ಷಿತ 2A ಮಿಸಲಾತಿಯ ಹೋರಾಟಕ್ಕೆ ನಾಗರಿಕ ಸಮಾಜದ ಸರಕಾರ ಪ್ರಮಾಣಿಕವಾಗಿ ಸ್ಪಂದಿಸಬೇಕಾಗಿತ್ತು. ಸ್ಪಂದಿಸುವ ವಿಸ್ವಾಸ ಕೂಡಾ ಇತ್ತು.ಆದರೆ ಇಲ್ಲಿಯವರೆಗೆ ವಿಳಂಬ ನೀತಿ ಅನುಸರಿಸಿದೆ. ಇನ್ನದಾರೂ ಎಚ್ಚತ್ತಕೊಂಡು ಸ್ಪಂದಿಸಲಿ ಎಂದು ಒತ್ತಾಯ ಮಾಡುತ್ತೆನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಶನಿವಾರ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಜಗದ್ಗುರು ಬಸವಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ 2A ಮೀಸಲಾತಿ 43 ನೇ ದಿನದ ಹೋರಾಟದಲ್ಲಿ ನೈತಿಕ ಬೆಂಬಲ ಸೂಚಿಸಿ ಮಾತನಾಡಿದರು.
ಪಂಚಮಸಾಲಿ ಸಮುದಾಯಲ್ಲೂ ಬಡತನದ ಪ್ರಮಾಣವಿದೆ. ಈ ಸಮುದಾಯದ ಜನರಿಗೂ ಎಲ್ಲಾ ರಂಗದಲ್ಲಿ, ಕ್ಷೇತ್ರದಲ್ಲಿ ಸಹಾಯ ಸಹಕಾರ ಸರಕಾರದಿಂದ ವಾಗಬೇಕಾಗಿದೆ. ಕಳೆದ 3 ವರ್ಷಗಳಿಂದ ನಿರಂತರವಾಗಿ ವಿವಿಧ ಸ್ವರೂಪದಲ್ಲಿ ಮೀಸಲಾತಿ ಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹೋರಾಟಕ್ಕೆ ಸರಕಾರ ಶೀಘ್ರವಾಗಿ ಬೆಂಬಲಸಿಬೇಕಾಗಿತ್ತು. ಇತಿಹಾಸ ಹೊಂದಿದ ದೊಡ್ಡ ಸಮುದಾಯದ ಪೀಠಾಧಿಪತಿಗಳು ರಾಜ್ಯದ ಕೇಂದ್ರ ಸ್ಥಾನದಲ್ಲಿ ಪ್ರತಿ ಭಟನೆ ಮಾಡುತ್ತಿರುವುದು ಅರ್ಥಮಾಡಿಕೊಳ್ಳಬೇಕು.ಇನ್ನಾದರೂ ಸರಕಾರ ಎಚ್ಚತ್ತಕೊಂಡು ಈ ಸಮುದಾಯದ ಬಹುದಿನಗಳ ಬೇಡಿಕೆ ಪೂರೈಸಲಿ ಎಂದರು.
ಈ ಸಂದರ್ಭದಲ್ಲಿ ಪ್ರಭಾಕರ ಬಗಲಿ, ಶಾಂತುಗೌಡ ಬಿರಾದಾರ, ನೀಲಕಂಠಗೌಡ ಪಾಟೀಲ, ರಾಜುಗೌಡ ಪಾಟೀಲ,ರವಿಗೌಡ ಪಾಟೀಲ, ಅಯ್ಯನಗೌಡ ಬಿರಾದಾರ, ಶಿವಪುತ್ರ ಮಲ್ಲೆವಾಡಿ, ರಾಜು ಕುಲಕರ್ಣಿ ಹಾಗೂ ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.