ಮುದ್ದೇಬಿಹಾಳ ;ಮುದ್ದೇಬಿಹಾಳ ಪಟ್ಟಣದ ಹೊರವಲಯದ ಆಲಮಟ್ಟಿ ರಸ್ತೆಯಲ್ಲಿ ಬರುವ ಬಿಎಎಸ್ ಇಂಟರ್ನ್ಯಾಷನಲ್ ಸ್ಕೂಲ್ ನಡೆದ ಬಿಎಎಸ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ ಬರೆಯಲು ವಿವಿಧ ತಾಲೂಕುಗಳಿಂದ ಏಳನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಪರೀಕ್ಷೆ ಬರೆದರು ನಾಲ್ಕು ರಿಂದ 8 ನೇ ತರಗತಿಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿದ್ಯಾರ್ಥಿ ಪರೀಕ್ಷೆ ಬರೆದರು 25 ಲಕ್ಷ ರೂ ಶಿಷ್ಯವೇತನದ ಬಿಎಎಸ್ ಟ್ಯಾಲೆಂಟ್ ಅವಾರ್ಡ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಟ್ಟು 200 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಈ ಕುರಿತು ಮಾಹಿತಿಯನ್ನು ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ನೀಡಿದ್ದಾರೆ.
ನಾಲ್ಕನೇ ತರಗತಿಯಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳ ಈ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯಲ್ಲಿ ಆಯ್ಕೆಯಾದ ಮೊದಲ ಹತ್ತು ವಿದ್ಯಾರ್ಥಿಗಳು 4 ಮತ್ತು 8 ನೇ ತರಗತಿಯ ತಲಾ 10 ವಿದ್ಯಾರ್ಥಿಗಳಂತೆ ಒಟ್ಟು 50 ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಶೇ 20% ರಿಯಾಯಿತಿ ಅದರಂತೆ 75 ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಶೇ 15% ರಿಯಾಯಿತಿ ಅದರಂತೆ 75 ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಶೇ 10% ರಿಯಾಯಿತಿ ನೀಡಲಾಗಿದೆ ಒಟ್ಟು 200 ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಆಯ್ಕೆಗಾಗಿದ್ದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ಮೆಡಲ್ ಹಾಕಿ ಗೌರವಿಸಲಾಯಿತು.
ವ್ಯಕ್ತಿತ್ವ ವಿಕಸನ ತರಬೇತುದಾರ ಅಮರೇಶ ಪಾಟೀಲ್ ಆಡಳಿತ ವ್ಯವಸ್ಥಾಪಕ ಪ್ರಭುಗೌಡ ಬಿರಾದಾರ, ಪ್ರಾಂಶುಪಾಲರಾದ ಶ್ರೀಮತಿ ಸುಪರ್ಣ ದಾಸ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶರಣು ಸಜ್ಜನ (ಸಿಪಿ) ಸುನಿಲ್ ಇಲ್ಲೂರ, ಸಂಗಮೇಶ ಕಡಿ, ಶಿವನಗೌಡ ಬಿರಾದಾರ ರಾಜುಗೌಡ ತುಂಬಗಿ, ರಾಜಶೇಖರ ಗೌಡರ, ಸೇರಿದಂತೆ ಅನೇಕ ಗಣ್ಯರು ನೂರಾರು ಪಾಲಕರು ಭಾಗವಹಿಸಿದ್ದರು.