ಇಂಡಿ : ಅನೈತಿಕ ಸಂಬಂಧದ ಸಂಶಯ ಹಿನ್ನೆಲೆ ಹೆಂಡತಿಯನ್ನು ಬರ್ಬರವಾಗಿ ಗಂಡನೋರ್ವ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಲಂಗೋಟಿ ತೋಟದ ವಸ್ತಿಯಲ್ಲಿ ನಡೆದಿದೆ. ಶಾಂತಾಬಾಯಿ ಲಂಗೋಟಿ ಹತ್ಯೆಯಾಗಿರುವ ದುರ್ದೈವಿ. ಇನ್ನು ಬಸಪ್ಪ ಲಂಗೋಟಿ ಹತ್ಯೆಗೈದಿರುವ ಪಾಪಿ ಗಂಡ. ಹೆಂಡತಿ ಶಾಂತಾಬಾಯಿ ಅನೈತಿಕ ಸಂಬಂಧದ ಸಂಶಯ ವ್ಯಕ್ತಪಡಿಸಿ, ಕುತ್ತಿಗೆ ಕಬ್ಬಿಣದ ರಾಡ್‌ನಿಂದ ಹೊಡೆದ ಕುತ್ತಿಗೆ ಕಟ್ ಮಾಡಿದ್ದಾನೆ. ಇದರಿಂದ ಹೆಂಡತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಕುರಿತು ಹೊರ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.