ವಿಜಯಪುರ ಜಿಲ್ಲೆಗೆ 1718.62 ಕೋಟಿ ಅನುದಾನ ಮೀಸಲಿಟ್ಟಿದ್ದು, 240 ಕಿ.ಮಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಪ್ರಕ್ರಿಯೆ ಆರಂಭವಾಗಿದೆ ಎಂದು ನಗರದಲ್ಲಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಮಹಾರಾಷ್ಟ್ರ ಗಡಿ ಭಾಗದಲ್ಲಿ ಮಾಶ್ಯಾಳ-ಕರ್ಜಗಿ-ಇಂಡಿ-ಅಥರ್ಗಾ-ವಿಜಯಪುರ ಮತ್ತು ಕನಮಡಿ-ತಿಕೋಟಾ
ರಸ್ತೆ ಹೀಗೆ ಒಟ್ಟು 134 ಕಿ.ಮಿ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ಪ್ರಾರಂಭಿಸಲಾಗಿದೆ. ಇದರ ಜೊತೆಗೆ ಸಿದ್ದಾಪುರ-ಅರಕೇರಿ-ಭೂತನಾಳ, ವಿಜಯಪುರ-ತೆಲಸಂಗ ಕ್ರಾಸ್, ವಿಜಯಪುರ-ಹುಬ್ಬಳ್ಳಿ-56 ಕಿ.ಮಿ ಹಾಗೂ ಮೇಲ್ಸೇತುವೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಜಾಲವನ್ನ ನಿರ್ಮಿಸುತ್ತಿದ್ದಾರೆ ಎಂದರು.