ಶಾಸಕರಿಂದ ಹುಬ್ಬೆ ಹುಣಸೆ ಡ್ಯಾಮ್ ಹಾಗೂ ಕಾಲುವೆಗಳ ವೀಕ್ಷಣೆ
ವರದಿ : ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು: ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರಾವರಿ ಯೋಜನೆ ಅಭಿವೃದ್ದಿ ಪಡಿಸುವ ಉದ್ದೇಶದಿಂದ ಶಾಸಕ ಎಂ.ಆರ್. ಮಂಜುನಾಥ್ ರವರು ಹುಬ್ಬೆಹುಣಸೆ ಡ್ಯಾಂ ಹಾಗೂ ಕಾಲುವೆಗಳನ್ನು ವೀಕ್ಷಿಣೆ ಮಾಡಿದರು.
ತಾಲ್ಲೂಕಿನ ಹುಬ್ಬೆಹುಣಸೆ ಡ್ಯಾಂ ಗೆ ನೀರಾವರಿ ಇಲಾಖೆ ಎಇಇ ಕರುಣಮಯಿ ಮತ್ತು ರೈತರ ಜೊತೆಗೂಡಿ ಡ್ಯಾಮ್ ವೀಕ್ಷಣೆ ಮಾಡಿದ ಶಾಸಕರು ಡ್ಯಾಂ ನಿಂದ ಹೊರ ಹೋಗುವ ತೋಲ್ಗುವೆಗಳನ್ನು ವೀಕ್ಷಿಸಲು ಕಾಲ್ನಾಡಿಗೆ ಮತ್ತು ಬೈಕ್ ನಲ್ಲಿ ತೆರಳಿ ಕಾಲುವೆಯಲ್ಲಿ ತುಂಬಿರುವ ಹೂಳು ಬೆಳೆದು ನಿಂತ್ತಿರುವ ಗಿಡಗೆಂಡೆಗಳನ್ನು ನೋಡಿದ ಶಾಸಕರು ನೀರು ಸರಾಗವಾಗಿ ಕೊನೆ ತನಕ ಹರಿಯಲು ಹಾಗೂ ನೀರು ಪೋಲು ಆಗುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿ ಕಳೆದ ಭಾರಿ ಹುಬ್ಬೆಹುಣಸೆ ಜಲಾಶಯ ನಾಲೆಗಳಲ್ಲಿ ಸಾಕಷ್ಟು ಸಿಲ್ಟ್ ಜಂಗಲ್ ತೆಗೆದು ನಾಲೆಯಲ್ಲಿ ಎಲ್ಲೇಮಾಳ ರಸ್ತೆ ತನಕ ನೀರು ಹರಿಸಲಾಗಿತ್ತು.
ಈ ಬಾರಿಯೂ ನೀರು ಬರುತಿದ್ಹಂಗೆ ಹರಿದು ತಟ್ಟೆಹಳ್ಳದ ಮೂಲಕ ನೀರು ನದಿಗೆ ಹೋಗುತ್ತದೆ. ಅದನ್ನು ತಡೆಗಟ್ಟಿ ರೈತರಿಗೆ ಅನುಕೂಲ ಕಲ್ಪಿಸಲು ನೀರು ಸಂಗ್ರಹಣೆಗಾಗಿ ಹಲವಾರು ಯೋಜನೆ ರೂಪಿಸಲು ರೈತರ ಜೊತೆ ವೀಕ್ಷಣೆ ಮಾಡಿದ್ದೇನೆ. ಎಂದರು
ಅಲ್ಲದೆ ವೈಶಂ ಪಾಳ್ಯ ಭಾಗದ ಜನರು ಕರೆ ತುಂಬಿಸುವಂತೆ ಕೇಳುತ್ತಿದ್ದು ಆ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಾಗಿದೆ.ಅರಕನ ಹಳ್ಳಕ್ಕೆ ಕಾಲುವೆ ಮುಖಾಂತರ ನೀರು ಸರಬರಾಜು ಮಾಡಿದರೆ ಅಂತರ್ಜಲ ವೃದ್ಧಿಗೆ ಅನುಕೂಲವಾಗುತ್ತದೆ ರೈತರ ಜಮೀನಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ.
ಹಾಗಾಗಿ ಈಗಾಗಲೇ ಒಂದಷ್ಟು ನೀರಾವರಿ ಯೋಜನೆ ಅಭಿವೃದ್ದಿಗೆ ಅನುದಾನ ಬಂದಿದ್ದು ಡಿಪಿಆರ್ ಸರ್ವೆ ಕಾರ್ಯ ನಡೆಯುತ್ತಿದ್ದು ಡಿಪಿಆರ್ ಸರ್ವೆ ಮುಗಿದ ಬಳಿಕ ಇನ್ನೆಷ್ಟು ಅನುದಾನ ಬೇಕಾಗುತ್ತದೆ ಎಂಬುದನ್ನು ಅಂದಾಜು ಮಾಡಿಕೊಂಡು ಸರ್ಕಾರದಿಂದ ಅನುಮೋಧನೆ ಪಡೆಯಬೇಕಾಗಿದೆ ಎಂದು ತಿಳಿಸಿದರು.
ಈ ವೇಳೆ ನೀರಾವರಿ ಇಲಾಖೆ ಎಇಇ ಕರುಣಾಮಯಿ,
ಕೆಆರ್ ಐಡಿಎಲ್ ಅಭಿಯಂತರ ಕಾರ್ತಿಕ್, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಹನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜೇಶ್ ಗೌಡ, ನಟರಾಜು, ಮುಖಂಡರಾದ ಹನೂರು ಗೋವಿಂದ ಚಿನ್ನತಂಬಿ,ಬಾಲು,ಚಿನ್ನವೆಂಕಟ,ಚಿನ್ನಸ್ವಾಮಿ,ಎಸ್.ಆರ್ ಮಹದೇವ್, ಚನ್ನಲಿಂಗನಹಳ್ಳಿ ವೆಂಕಟೇಶ್ ,ಆರ್ ಮಹಾದೇವ ಗೌಡ,ಎಸ್ ಮಲ್ಲೇಗೌಡ,ಹಾಗೂ ರೈತ ಮುಖಂಡರುಗಳು ಇನ್ನಿತರರು ಉಪಸ್ಥಿತರಿದ್ದರು.



















