ಆತ್ಮರಕ್ಷಣೆಗಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪೋಷಕರಿಂದ ಟ್ರ್ಯಾಕ್ ಸೂಟ್ ವಿತರಣೆ…
ಇಂಡಿ : ಇತ್ತಿಚಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ರೀತಿಯಲ್ಲಿ ಹಲ್ಲೆಗಳು ನಡೆಯುತ್ತಿವೆ.ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಅತ್ಯಂತ ಹೆಚ್ಚು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಶತಮಾನದ ಹಿನ್ನೆಲೆಯಿರುವ ಸರಕಾರಿ ಹೆಣ್ಣು ಮಕ್ಕಳು ಹಿರಿಯ ಪ್ರಾಥಮಿಕ ಶಾಲೆ ಕೆ ಜಿ ಎಸ್ ಗಾಂಧಿ ಚೌಕ ಇಂಡಿ ಶಾಲೆಯಲ್ಲಿ ಸಮವಸ್ತ್ರದ ವಿಷಯದಲ್ಲಿ ಇಂದು ಬೇರೆ ಶಾಲೆಗಳಿಗೆ ಮಾದರಿ ಶಾಲೆಯಾಗಿದೆ.ಸಮವಸ್ತ್ರದ ವಿಷಯದಲ್ಲಿ ಸರಕಾರಿ ಶಾಲೆಯಾಗಿ ಒಂದು ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ.
ಈ ಶಾಲೆಯಲ್ಲಿ ವಿಶೇಷವಾಗಿ ಇಂದು ಸುಮಾರು ಆರನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಈ ಶಾಲೆಯ ಹೆಣ್ಣು ಮಕ್ಕಳಿಗೆ ದೈಹಿಕ ಚಟುವಟಿಕೆಗಾಗಿ ಮತ್ತು ಯೋಗ ತರಬೇತಿಗಾಗಿ ಶಾಲೆಯ ವಿದ್ಯಾರ್ಥಿನಿಯರ ಪೋಷಕರು ಸ್ವತಃ ತಮ್ಮ ಮಕ್ಕಳ ಸಮವಸ್ತ್ರಕ್ಕೆ ಮುತವರ್ಜಿವಹಿಸಿ ಪ್ರತಿ ಪಾಲಕರು ತಮ್ಮ ಕೈಯಿಂದ ಹಣ ನೀಡಿ ಟ್ರ್ಯಾಕ್ ಸೂಟ್ ಖರೀದಿಗಾಗಿ ಈ ಶಾಲೆಗೆ ಸಹಕರಿಸಿದ್ದಾರೆ. ಸಮವಸ್ತ್ರ ತೊಟ್ಟ ಶಾಲೆಯ ಮಕ್ಕಳಿಗೆ ತಾವು ನಗರದ ಯಾವ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿಗಳಿಗೂ ಕಡಿಮೆ ಇಲ್ಲ ಎಂಬುವದು ಮನವರಿಕೆಯಾಗಿದೆ. ಸಮವಸ್ತ್ರದ ತೊಟ್ಟ ಪರಿಣಾಮ ಶಾಲಾ ಮಕ್ಕಳ ಮನಸು ಈಗ ಚೈತನ್ಯ ಚಿಲುಮೆಯಾಗಿದೆ. ಹೊಸ ಇಡೀ ಶಾಲೆ ಹೊಸ ಲವಲವಿಕೆಯಿಂದ ಕೂಡಿಕೊಂಡಿದೆ.
ಕೆ ಜಿ ಎಸ್ ಶಾಲೆಯ ವಿಧ್ಯಾರ್ಥಿನೀಯರು ದಿನನಿತ್ಯ ಹುರುಪಿನಿಂದ ಶಾಲೆಗೆ ನಿಯಮಿತವಾಗಿ ಹಾಜರಾಗಿ ಪಾಠ ಪ್ರವಚನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಶಾಲೆಗೆ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಈ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ.ಈ ಶಾಲೆಯೂ ಗುಣಮಟ್ಟದ ಶಿಕ್ಷಣದೊಂದಿಗೆ ಪಠ್ಯೆತರ ಚಟುವಟಿಕೆಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತರುತ್ತಿದ್ದಾರೆ.
ಈ ಶಾಲೆಯ ಮಕ್ಕಳು ಎರಡು ದಶಕಗಳ ಕಾಲ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಬಾರಿ ವಿಜೇತರಾಗಿರುವ ದಾಖಲೆ ಈ ಶಾಲೆಯ ಹೆಸರಿನಲ್ಲಿದೆ.ಇದಲ್ಲದೇ ಶಿಕ್ಷಣ ಇಲಾಖೆಯವರು ಏರ್ಪಡಿಸುವ ಹಲವಾರು ಶೈಕ್ಷಣಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಿಕ್ಷಣ ಇಲಾಖೆಗೆ ಈ ಶಾಲೆಯ ಮಕ್ಕಳು ಗೌರವ ತಂದಿರುವ ವಿಷಯ ಹೆಮ್ಮೆಯ ಸಂಗತಿಯಾಗಿದೆ. ಈ ಶಾಲೆಯಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರೊಂದಿಗೆ ವಿಜ್ಞಾನ ಗಣಿತ ಹಿಂದಿ ಪದವೀಧರ ಪಡೆದ ಅನುಭವವಿರುವ ಸುಮಾರು ಇಪ್ಪತ್ತೊಂದು ಗುರುಗಳು ಗುರು ಮಾತೆಯರ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಪ್ಪತ್ತ್ಮೂರು ಕೊಠಡಿ ಸಮೇತ ವಿಜ್ಞಾನ ಪ್ರಯೋಗಾಲಯದ ಕೊಠಡಿ ಮುಖ್ಯ ಗುರುಗಳ ಕಾರ್ಯಾಲಯ ಗಣಕ ಯಂತ್ರದ ಕೊಠಡಿ ಆಹಾರು ದಾಸ್ತಾನು ಕೊಠಡಿ ಬಿಸಿ ಊಟದ ಕೊಠಡಿ ಹೀಗೆ ಹಲವಾರು ರೀತಿಯಲ್ಲಿ ಸೌಲಭ್ಯವಿರುವ ಶಾಲೆ ಇಂದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿ ಶೈಕ್ಷಣಿಕ ರಂಗದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ನಮ್ಮ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ದಶರಥ ಕೋರಿಯವರ ಸಮವಸ್ತ್ರದ ಕಳಕಳಿಯ ಮನವಿಗೆ ಷೋಷಕರು ಸ್ಪಂದಿಸಿ ಈ ವಿಶೇಷ ಸಮವಸ್ತ್ರಕ್ಕೆ ತಮ್ಮ ನೆರವಿನ ಹಸ್ತ ಚಾಚಿದ್ದಾರೆ. ಈ ಕಾರ್ಯಕ್ಕೆ ಸೂಕ್ತ ಸಲಹೆ ಸೂಚನೆ ನೀಡಿದ ನಮ್ಮ ಶಾಲಾ ಸಿಬ್ಬಂದಿಗಳಿಗೆ ಮತ್ತು ಪೋಷಕರಿಗೆ ನಮ್ಮ ಎಸ್ ಡಿ ಎಮ್ ಸಿ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಮಾರ್ಗದರ್ಶನ ಮಾಡಿದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅನಂತ ಕೃತಜ್ಞೆತೆಗಳು.
ಯು ಎಚ್ ಚವ್ಹಾಣ ಮುಖ್ಯ ಗುರುಗಳು